ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಪ್ರದೇಶದಲ್ಲಿ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ಹೆಜ್ಜೆನು ದಾಳಿ ನಡೆಸಿದ ಘಟನೆ ನಡೆದಿದೆ.
ಹಂಪಿಯ ಆನೆಯಾಳದ ಬಳಿ ಹೋಗುವ ದಾರಿಯಲ್ಲಿ ಹೆಜ್ಜೆನು ದಾಳಿ ಸಂಭವಿಸಿದ್ದು, ಇದರಿಂದ ಕೆಲಕಾಲ ಭಾರೀ ಆತಂಕ ಉಂಟಾಯಿತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿಲ್ಲ. ಹೆಜ್ಜೆನು ಕಡಿತಕ್ಕೆ ಭಯಗೊಂಡ ಪ್ರವಾಸಿಗರು ಹಾಗೂ ವೃದ್ಧರು ಸ್ಥಳದಿಂದ ಓಡಿ ತಪ್ಪಿಸಿಕೊಂಡರು.
ಹೆಜ್ಜೆನುಗಳಿಂದ ಪಾರಾಗಲು ಕೆಲವರು ಟವಲ್‌ಗಳು, ವೇಲ್‌ಗಳನ್ನು ದೇಹದ ಮೇಲೆ ಮುಚ್ಚಿಕೊಂಡು ಓಡಿದ ದೃಶ್ಯಗಳು ಕಂಡುಬಂದವು. ಸಮಯಕ್ಕೆ ಎಚ್ಚರಿಕೆ ವಹಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ. ಘಟನೆಯ ಬಳಿಕ ಪ್ರವಾಸಿಗರು ಸುರಕ್ಷಿತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.



