ವಿಜಯಪುರ: ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಜನರು ಅಸ್ವಸ್ಥ

0
Spread the love

ವಿಜಯಪುರ: ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಜನ ಅಸ್ವಸ್ಥಗೊಂಡಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬ್ಯಾಲಿಹಾಳ್ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮ ಪಂಚಾಯತಿಯಿಂದ ಪೂರೈಕೆಯಾಗುವ ನೀರು ಕುಡಿದು ಕಳೆದ ಮೂರು ದಿನಗಳಿಂದ 30ಕ್ಕೂ ಅಧಿಕ ಜನ ಅಸ್ವಸ್ಥಗೊಂಡು ಪರದಾಡುತ್ತಿದ್ದಾರೆ. ಹಿನ್ನೆಲೆ ವೈದರ ತಂಡವೊಂದು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಎರಡು ಅಂಬುಲೆನ್ಸ್ ಕೂಡ ಅಲ್ಲಿಯೇ ಇವೆ.

ಅಲ್ಲದೇ ಕೆಲವರು ಚಿಕಿತ್ಸೆಗಾಗಿ ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಜೊತೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಿಲಾಗಿದೆ.


Spread the love

LEAVE A REPLY

Please enter your comment!
Please enter your name here