ಗದಗ ಶಹರ ಪೊಲೀಸರ ಕಾರ್ಯಾಚರಣೆ; ಎಸ್.ಎಮ್ ಕೃಷ್ಣ ನಗರದ ಉಸ್ತಾದ್ ಬಂಧನ

0
Spread the love

ಎರಡು ಪ್ರಕರಣ ಬೇಧಿಸಿದ ಶಹರ ಪೊಲೀಸರು- ಎಸ್ಪಿ ಪ್ರಶಂಸೆ…..

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಕಳ್ಳತನ ಪ್ರಕರಣವನ್ನು ಭೇದಿಸಿರುವ ಗದಗ ಶಹರ ಪೊಲೀಸರು, ಎಸ್.ಎಮ್ ಕೃಷ್ಣ ನಗರದ ಯುವಕನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಎಸ್.ಎಮ್. ಕೃಷ್ಣ ನಗರದ ನಿವಾಸಿ, ಗೌಂಡಿ ಕೆಲಸ ಮಾಡುತ್ತಿದ್ದ ಅಲ್ತಾಫ್ ತಂದೆ ಅಬ್ದುಲ್ ಹಮೀದ್ ಉಸ್ತಾದ್ (25) ಎಂದು ಗುರುತಿಸಲಾಗಿದೆ. ಬಂಧಿತನಿಂದ ನಗದು 1ಲಕ್ಷ 90 ಸಾವಿರ ರೂಪಾಯಿ, ನಾಲ್ಕು ಜಿಮ್ ಪ್ಲೇಟ್ ಹಾಗೂ ಎರಡು ಡಂಬೆಲ್ಸ್ ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿ ಅಲ್ತಾಫ್, ಸ್ಟೇಷನ್ ರಸ್ತೆಯ ಎಸ್ ಬಿಐ ಬ್ಯಾಂಕ್ ಬಳಿ ನಿಲ್ಲಿಸಿದ್ದ ಸ್ಕೂಟಿ ಒಂದರಲ್ಲಿದ್ದ 2ಲಕ್ಷ 40 ಸಾವಿರ ರೂಪಾಯಿಗಳನ್ನು 20-06-2023 ರಂದು ಕಳ್ಳತನ ಮಾಡಿದ್ದ. ಈ ಕುರಿತು ವ್ಯಾಪಾರಿ ವಾಲ್ಮೀಕಿ ಭವನದ ಹತ್ತಿರದ ಭಾಪಣಾ ಲೇಔಟ್ ನಿವಾಸಿ ಸೈಯದ್ ರಶೀದ್ ಅಬ್ದುಲ್ ಗಣಿ ಮಕಾನದಾರ ಎಂಬವರು ಶಹರ ಠಾಣೆಯಲ್ಲಿ ದೂರು ನೀಡಿದ್ದರು.

ಮತ್ತೊಂದು ಪ್ರಕರಣದಲ್ಲಿ ಹೊಂಬಳ ರಸ್ತೆಯಲ್ಲಿ ಇರುವ ಮುಕ್ತಿದಾಮದ ಕಾರ್ಯಾಲಯದ ಬೀಗ ಮುರಿದು 30 ಸಾವಿರ ರೂ. ಮೌಲ್ಯದ 4 ಜಿಮ್ ಡೆಂಬಲ್ಸ್ ಹಾಗೂ ಜಿಮ್ ವೇಟ್ ಪ್ಲೇಟ್ಸ್, ಟ್ರಝರಿ ಮೀಟಿ ಅದರಲ್ಲಿದ್ದ 75ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಕಾರ್ಮಿಕ ನೀಲಕಂಠ ತಂದೆ ನಾಗಪ್ಪ ಕಾಳೆ ಎಂಬುವರು ಶಹರ ಠಾಣೆಗೆ ದೂರು ನೀಡಿದ್ದರು.

ಎರಡೂ ಪ್ರಕರಣಗಳನ್ನು ಭೇದಿಸಲು ಎಸ್ಪಿ ಬಿ. ಎಸ್ . ನೇಮಗೌಡ, ಡಿವೈಎಸ್ಪಿ ಮಡಿವಾಳಪ್ಪ ಸಂಕದ ಅವರ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಎಸ್ ನೇತೃತ್ವದಲ್ಲಿ ಶಹರ ಠಾಣೆಯ ಪಿಎಸ್ಐ ಜಿ.ಟಿ ಜಕ್ಕಲಿ ಹಾಗೂ ಸಿಬ್ಬಂದಿಗಳಾದ ಎಸ್.ಎಸ್ ಮಾವಿನಕಾಯಿ, ಯು.ಎಫ್ ಸುಣಗಾರ, ಕೆ.ಡಿ ಜಮಾದಾರ, ಅಂದಪ್ಪ ಹಣಜಗಿ, ಪ್ರವೀಣ ಕಲ್ಲೂರ, ಪಿ.ಎ. ಭರಮಗೌಡರ್ ಹಾಗೂ ವೀರಪ್ಪ ಗೌಡನಾಯ್ಕರ್ ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ಎರಡೂ ಪ್ರಕರಣ ಭೇದಿಸಿದ ತಂಡಕ್ಕೆ ಎಸ್ಪಿ ಬಾಬಾಸಾಬ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here