ವಿಜಯಸಾಕ್ಷಿ ಸುದ್ದಿ, ಗದಗ
Advertisement
ತುಕ್ಕು ಹಿಡಿದಿದ್ದ ಬೀದಿಲೈನ್ ತಂತಿಯೊಂದು ತುಂಡಾಗಿ ಬಿದ್ದ ಪರಿಣಾಮ ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ನಗರದ ಕೈಲಾಸ ವರಸಿದ್ಧಿ ವಿನಾಯಕ ದೇವಸ್ಥಾನ ಬಳಿ ಜರುಗಿದೆ.
ಮೂಲತಃ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ಸುಶೀಲಾ (60) ಎಂಬ ಮಹಿಳೆಯೇ ಮೃತಪಟ್ಟ ದುರ್ಧೈವಿ.
ಮೃತ ಮಹಿಳೆ ಗೀತಾ ಪಿ.ಜಿ ಸೆಂಟರ್‌ನಲ್ಲಿ ಸಹೋದರಿಯ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಪಿ.ಜಿ ಸೆಂಟರ್ ನಿಂದ ಹೊರ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.
ಮೊದಲೇ ವಿದ್ಯುತ್ ತಂತಿ ತುಕ್ಕು ಹಿಡಿದಿತ್ತು ಎನ್ನಲಾಗಿದೆ. ಹೀಗಾಗಿ ಗಾಳಿಯಿಂದ ತುಂಡಾಗಿ ಬಿದ್ದ ಪರಿಣಾಮವಾಗಿ ಈ ಅವಘಡ ಸಂಬಂಧಿಸಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸುದ್ದಿ ತಿಳಿದು ಬೆಟಗೇರಿ ಬಡಾವಣೆ ಪೊಲೀಸರು, ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.