ಗ್ರಾಮದಲ್ಲಿ ಸೂತಕದ ಛಾಯೇ….
ವಿಜಯಸಾಕ್ಷಿ ಸುದ್ದಿ, ಗದಗ
ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಹಬ್ಬದಲ್ಲಿ ಪ್ರತ್ಯೇಕ ಗ್ರಾಮಗಳಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ದಾರುಣ ಘಟನೆ ಇಂದು ಜರುಗಿದೆ.
ಇದನ್ನೂ ಓದಿ ಫಾರ್ಮ್ ನಂ.3 ವಿತರಣೆಯಲ್ಲಿ ಕರ್ತವ್ಯಲೋಪ; ನಗರಸಭೆ ಕಂದಾಯ ಅಧಿಕಾರಿ ಸಸ್ಪೆಂಡ್ ಮಾಡಿ ಡಿಸಿ ಆದೇಶ
ಇವತ್ತು ಮೊಹರಂ ಕೊನೆಯ ದಿನವಾಗಿದ್ದರಿಂದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಜಾಗಳ (ಅಲಿದೇವರು) ಮೆರವಣಿಗೆಯಲ್ಲಿ ಹೆಜ್ಜೆ ಮಜಲಿನಲ್ಲಿ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿ ನೋಡುನೋಡುತ್ತಿದ್ದಂತೆಯೇ ಕುಸಿದುಬಿದ್ದ. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅಸುನಿಗಿದ್ದಾನೆ.
ಲಕ್ಕುಂಡಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಇಮಾಮ್ ಸಾಬ ನದಾಫ್ (55) ಮೃತಪಟ್ಟ ದುರ್ಧೈವಿಯಾಗಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ ಅಲಿದೇವರು (ಪಂಜಾ) ಹೊತ್ತಿದ್ದ ವ್ಯಕ್ತಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗದಗ ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶರೀಫ್ ಮೂಲಿಮನಿ (40) ಮೃತಪಟ್ಟ ದುರ್ಧೈವಿ. ಮೊಹರಂ ಹಬ್ಬದ ಕೊನೆಯ ದಿನವೇ ಈ ಎರಡೂ ಘಟನೆ ನಡೆದಿದ್ದು, ಎರಡೂ ಗ್ರಾಮದಲ್ಲಿ ಸೂತಕರ ವಾತಾವರಣ ನಿರ್ಮಾಣವಾಗಿದೆ.