ನಿಲ್ಲದ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಟ ದಂಧೆ….
ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಕಾರ್ ಸಮೇತ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
ಮುಂಡರಗಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ತನ್ನ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಗದಗ ನಗರದ ಖಾನತೋಟ, ನಾಗಲಿಂಗ ನಗರದ ಜನತಾ ಕಾಲೋನಿಯ ಶಬ್ಬೀರ ಅಹ್ಮದ್ ತಂದೆ ಅಬ್ದುಲ್ ಸಾಬ ಮುಲ್ಲಾ ಎಂಬಾತ ಸಿಕ್ಕಿ ಬಿದ್ದಿದ್ದಾನೆ.
ka25/c 7230 ನಂಬರಿನ ಕಾರಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು.
ಗದಗ ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಆರೋಪಿ ಶಬ್ಬೀರ ಅಹ್ಮದ್ ಮುಲ್ಲಾ ಎಂಬಾತನನ್ನು ಸಾರ್ವಜನಿಕರು ಕಾರ್ ಸಮೇತ ಪೊಲೀಸರಿಗೆ ಒಪ್ಪಿಸಿದ್ದರು.
ಸುಮಾರು 11,220 ರೂ.ಗಳ ಮೌಲ್ಯದ 330ಕೆಜಿ ತೂಕದ 13 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ.
ಈ ಕುರಿತು ಆರೋಪಿ ಶಬ್ಬೀರ ಅಹ್ಮದ್ ಮೇಲೆ ಕಲಂ:03 ಮತ್ತು 07. ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕಲಂ:18 ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶ 2016ರ ಪ್ರಕಾರ ಮುಂಡರಗಿ ಆಹಾರ ನಿರೀಕ್ಷಕರಾದ ಜಗದೀಶ್ ಅಮಾತಿ ದೂರು ನೀಡಿದ್ದು, c/no-0114/2023 ದಾಖಲಾಗಿದೆ.