ಮಟಮಟ ಮಧ್ಯಾಹ್ನ ನಡೆದ ಘಟನೆ….
ವಿಜಯಸಾಕ್ಷಿ ಸುದ್ದಿ, ನರಗುಂದ
ಎಪಿಎಮ್ ಸಿ ಆವರಣದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿ ಗಾಬರಿಬಿದ್ದ ಕೆಲವು ಜನರು ಓಡಾಡಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ಎಪಿಎಮ್ ಸಿ ಆವರಣದಲ್ಲಿ ಇರುವ ಕಚೇರಿಯ ಹಿಂದಿನ ಪೈಪ್ ನಲ್ಲಿ ನಾಗರಹಾವು ಇತ್ತು. ಅದನ್ನು ಕಂಡ ಕೆಲವು ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿ ಓಡಾಡಿದರು.
ತಕ್ಷಣವೇ ಉರಗ ತಜ್ಞ ಸ್ನೇಕ್ ಬುಡ್ಡಾ ಅವರಿಗೆ ಕಚೇರಿಯ ಸಿಬ್ಬಂದಿ ಕರೆ ಮಾಡಿ ಕರೆಸಿಕೊಂಡಿದ್ದಾರೆ.
ಆಗ ಸ್ಥಳಕ್ಕೆ ಬಂದ ಸ್ನೇಕ್ ಬುಡ್ಡಾ ಅವರು, ಅದನ್ನು ಹಿಡಿಯಲು ಮುಂದಾದರು. ಸಾಕಷ್ಟು ಹೊತ್ತು ಕಾಡಿಸಿದ ನಾಗರಹಾವು ಕೊನೆಗೂ ನೀರಿನ ಜಾರಿನೊಳಗೆ ಹೋಗಿ ಕುಳಿತುಕೊಂಡಿತು.
ನಂತರ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ನಾಗರಹಾವನ್ನು ಬಿಟ್ಟು ಬರಲಾಯಿತು.



