ಬೆಟಗೇರಿ ಬಡಾವಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ; ಇಬ್ಬರು ಹುಬ್ಬಳ್ಳಿ ಸೆಟ್ಲಮೆಂಟ್‌ ನಿವಾಸಿಗಳ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಇಲ್ಲಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂ. ದೋಚಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕಳ್ಳತನ ನಡೆದು 48 ಗಂಟೆಗಳಲ್ಲಿಯೇ ಬೆಟಗೇರಿ ಬಡಾವಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಗಂಗಾಧರ ನಗರ ಸೆಟ್ಲಮೆಂಟ್‌ನ ಮಂಜುನಾಥ ಪರಶುರಾಮ ಕ್ಯಾರಕಟ್ಟಿ, ಸುನೀಲ್ ದೇವೆಂದ್ರಪ್ಪ ಗುರಾಲ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, 1.75 ಲಕ್ಷ ರೂ. ವಶಪಡಿಕೊಂಡಿದ್ದಾರೆ.

ಗದಗದಿಂದ ಕಂಪ್ಲಿಗೆ ಹೋಗಲು ತಮ್ಮ ಪತ್ನಿಯ ಜೊತೆಗೆ ನವೀನ್ ಬಸವರಾಜ್ ಎಂಬುವವರು ಜ.22ರಂದು ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತುತ್ತಿದ್ದಾಗ ಬಸ್ ಹತ್ತಿ ಮುಂದೆ ಹೋಗದೇ ಮೆಟ್ಟಿಲ ಮೇಲೆ ನಿಂತಿದ್ದ ಇಬ್ಬರು ಯುವಕರು ತಳ್ಳಾಡಿದಂತೆ ಮಾಡಿ ಕಿಸೆಯಲ್ಲಿದ್ದ 2.36 ಲಕ್ಷ ರೂ. ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನವೀನ್ ಬಸವರಾಜ್ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಎಸ್‌ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟರ, ಸಿಪಿಐ ಬಿ.ಜೆ.ಸುಬ್ಬಾಪೂರಮಠ ಮಾರ್ಗದರ್ಶನದಲ್ಲಿ ಪಿಎಸ್‌ಐ ಆರ್. ಆರ್. ಮುಂಡೆವಾಡಗಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿ.ಎಚ್.ದೊಡ್ಡಮನಿ, ಸಂಜೀವ ಕೊರೊಡೂರ, ಎಸ್.ಎಚ್.ಕಮತರ, ಆರ್.ಐ.ಗುಂಜಾಳ, ಸಿ.ವ್ಹಿ.ತಿರ್ಲಾಪುರ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರು ಶ್ಲಾಘಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here