ಸಾಹುಕಾರ್ ಕುಟುಂಬದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಮಾರಾಟಕ್ಕೆ ನಿಂತಿದ್ದ ಚೀಟರ್ಸ್…
ವಿಜಯಸಾಕ್ಷಿ ಸುದ್ದಿ, ಗದಗ
ಯಾರದೋ ಆಸ್ತಿ ಮತ್ತೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಎಂಟು ಜನರಲ್ಲಿ ಆರು ಜನರನ್ನು ಬಂಧಿಸಿಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಭವನದ ಬಳಿ ಇರುವ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿಕೊಡುವ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದು, ಸಬ್ ರಿಜಿಸ್ಟ್ರಾರ್ ಈ ಕುರಿತು ಮೂಲ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಂಟು ಜನ ಆರೋಪಿಗಳಲ್ಲಿ ಆರು ಜನರನ್ನು ಬಂಧಿಸಲಾಗಿದೆ. ತನಿಖೆ ನಡೆಸಿ, ಈ ಪ್ರಕರಣದಲ್ಲಿ ಭಾಗವಹಿಸಿದ ಎಲ್ಲರನ್ನೂ ಬಂಧಿಸಲಾಗುವುದು ಎಂದರು.
ಪ್ರಕರಣದ ವಿವರ
ಕೋಟ್ಯಾಂತರ ರೂ. ಮೌಲ್ಯದ ಜಮೀನನ್ನು ನಮ್ಮದೇ ಜಮೀನು ಎನ್ನುವಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ಮತ್ತೊಬ್ಬರಿಗೆ ಮಾರಾಟಕ್ಕೆ ಹೊಂಚು ಹಾಕಿದ್ದ ಗ್ಯಾಂಗ್ ವೊಂದು ಸಬ್ ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ ಹಾಗೂ ಪರಿಚಿತ ವ್ಯಕ್ತಿಗಳ ಸಮಯ ಪ್ರಜ್ಞೆ ಯಿಂದ ಸಿಕ್ಕಿಬಿದ್ದ ಘಟನೆ ಜರುಗಿದೆ.
ಗದಗ ನಗರದ ಪ್ರಸಿದ್ಧ ಮನೆತನವಾದ ಸಾಹುಕಾರ್ ಕುಟುಂಬಕ್ಕೆ ಸೇರಿದ ಹುಬ್ಬಳ್ಳಿ ರಸ್ತೆಯ ಜಿಲ್ಲಾಡಳಿತ ಭವನದ ಹಿಂದೆ ಇರುವ ಕೋಟ್ಯಾಂತರ ರೂ. ಮೌಲ್ಯದ ಜಮೀನನ್ನು ತಮ್ಮದೇ ಜಮೀನು ಅಂತ ಮಾರಾಟಕ್ಕೆ ಮುಂದಾದಾಗ ಸಿಕ್ಕಿ ಬಿದ್ದಿದ್ದಾರೆ.
ಇಲ್ಲಿನ ಜಿಲ್ಲಾಡಳಿತ ಭವನದ ಹತ್ತಿರ ಇರುವ ಕೋಟ್ಯಾಂತರ ರೂ ಮೌಲ್ಯದ ರಿ.ಸ ನಂ 298-20ಎಕರೆ 34 ಗುಂಟೆ ಕೃಷಿ ಜಮೀನನ್ನು, ಪ್ರಕರಣದ ಮುಖ್ಯ ರೂವಾರಿಗಳಾದ ಹಾತಲಗೇರಿ ಗ್ರಾಮದ ಕೃಷ್ಣಗೌಡ ತಂದೆ ಮಲ್ಲನಗೌಡ ಪಾಟೀಲ, ಬಸವರಾಜ್ ತಂದೆ ಸೋಮಪ್ಪ ಮೇಲ್ಮನಿ ಎಂಬುವರು, ಹಾತಲಗೇರಿ ಗ್ರಾಮದ ರಂಗನಗೌಡ ತಂದೆ ಮಲ್ಲನಗೌಡ ಪಾಟೀಲ, ಗದಗ ತಾಲೂಕಿನ ಕದಡಿ ಗ್ರಾಮದ, ಹಾಲಿ ವಸ್ತಿ ಗದಗ ನಿವಾಸಿ ಈಶ್ಚರಪ್ಪ ತಂದೆ ಸಂಗಪ್ಪ ಪೂಜಾರ,
ಬೆಟಗೇರಿಯ ಸುಲೇಮಾನ್ ತಂದೆ ಮೆಹಬೂಬಸಾಬ ಮಾಳೆಕೊಪ್ಪ, ಹಾತಲಗೇರಿ ಗ್ರಾಮದ ಲಕ್ಷ್ಮೀಬಾಯಿ ಕೋ ರಂಗನಗೌಡ ಪಾಟೀಲ, ಹುಬ್ಬಳ್ಳಿ ಮೂಲದ ಹಾತಲಗೇರಿ ನಿವಾಸಿ ಗಂಗಮ್ಮ ಕೋ ಶಿವಾನಂದ ಕರಿಯಣ್ಣವರ, ಹಾತಲಗೇರಿ ಗ್ರಾಮದ ಸವಿತಾ ಕೋ ನಾಗರಾಜ್ ಮೇಲ್ಮನಿ ಇವರ ಆಧಾರ ಕಾರ್ಡ್ ನಲ್ಲಿ
ಜಮೀನಿನ ಮಾಲೀಕರಾದ ಶ್ರೀಧರ್ ದಾಸ ದೇವಿದಾಸ ಸಾಹುಕಾರ್ ಹಾಗೂ ಶೀಲಾಬಾಯಿ ಸಾಹುಕಾರ್, ಯೋಗೇಶ್ ಸಾಹುಕಾರ್ ಎಂಬುವರ ಹೆಸರುಗಳನ್ನು ಎಲ್ಲಿಂದಲೂ ನಮೂದಿಸಿಕೊಂಡು ತಿದ್ದುಪಡಿ ಮಾಡಿಸಿಕೊಂಡು ತಾವೇ ಜಮೀನಿನ ಮಾಲೀಕರು ಅಂತ ಸುಳ್ಳು ಕಾಗದ ಪತ್ರಗಳನ್ನು ಸೃಷ್ಟಿಸಿಕೊಂಡು ನೈಜ ಕಾಗದಪತ್ರಗಳಂತೆ ಗದಗನ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಗೆ ಕೊಟ್ಟು ಮೋಸತನದಿಂದ ಮಾರಾಟ ಅಥವಾ ಖರೀದಿ ಮಾಡಿಸಲು ಯತ್ನಿಸಿದಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಣಕಾಸಿನ ವಿಚಾರ; ಮಾರಕಾಸ್ತ್ರಗಳಿಂದ ಹೊಡೆದಾಟ; ಏಳು ಜನರಿಗೆ ಗಾಯ, ಹೊಡೆದಾಟದ ವಿಡಿಯೋ ವೈರಲ್…!
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 0110/2023-IPC 1860(U/s-120B, 420, 419, 465,467,468, 471 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.