ಹಗ್ಗ, ಚೈನ್ ಹಾಗೂ ಚಾಕು ಜಪ್ತಿ
ವಿಜಯಸಾಕ್ಷಿ ಸುದ್ದಿ, ಬೆಟಗೇರಿ
ವಾಹನ ಸವಾರರ ತಡೆದು ಹಣ ಸುಲಿಗೆ ಮಾಡಲು ಹೊಂಚು ಹಾಕಿದ್ದ ಮೂವರನ್ನು ಬೆಟಗೇರಿ ಪೊಲೀಸರು ಬಂಧಿಸಿದ್ದಾರೆ.
ಬೆಟಗೇರಿಯ ನರಸಾಪೂರ ಬಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಾಹನ ಸವಾರರನ್ನು ಟಾರ್ಗೆಟ್ ಮಾಡಿ ಅವರಿಗೆ ಹಗ್ಗದಿಂದ ತಡೆಯೊಡ್ಡಿ ಹಣ ಸುಲಿಗೆ ಮಾಡಲು ಹೊಂಚು ಹಾಕಿದ್ದ ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡುವ ಬೆಟಗೇರಿಯ ಗೌರಿಗುಡಿ ಓಣಿಯ ವೀರೇಶ್ ತಂದೆ ಬಸವರಾಜ್ ಕದಡಿ(27), ಗೌಂಡಿ ಕೆಲಸ ಮಾಡುವ ಬೆಟಗೇರಿಯ ರಂಗಾವದೂತ ನಗರದ ಮುತ್ತು ತಂದೆ ತಿಪ್ಪಣ್ಣ ಮಡ್ಡಿಕಾರ (23) ಹಾಗೂ ಇನ್ನೊಬ್ಬ ಬೆಟಗೇರಿಯ ಸೆಟ್ಲಮೆಂಟ್ ನಿವಾಸಿ ಅಬ್ದುಲ್ ರಜಾಕ್ ತಂದೆ ಶಾಸ್ಯಾವಲಿ ಸಂಕನಾಳ (24) ಎಂಬ ಮೂವರನ್ನು ಬೆಟಗೇರಿ ಪಿಎಸ್ಐ ಪ್ರಕಾಶ್ ಬಣಕಾರ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತರಿಂದ ಹಗ್ಗ, ಮೋಟಾರು ಸೈಕಲ್ ಚೈನ್, ಹಾಗೂ ಚಾಕು ಜಪ್ತಿ ಮಾಡಲಾಗಿದೆ.
ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಐಪಿಸಿ 1860 (U/s-34, 393 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.