ವಿಜಯಸಾಕ್ಷಿ ಸುದ್ದಿ, ಗದಗ
ತಮ್ಮ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ 1ರಂದು ಸಂಜೆ 6.45ರ ಸುಮಾರಿಗೆ ಗಂಗಿಮಡಿಯಿಂದ ಹಿರೇಹಂದಿಗೋಳ ಗ್ರಾಮದ ಕಡೆ ಮುಂದುವರೆದ ರಸ್ತೆಯ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದರು.
ನಗರದ ನೀಲಮ್ಮ ಗುಡಿ ಬಳಿಯ ನಿವಾಸಿ ಶ್ರೀಶೈಲಯ್ಯ ರಾಚಯ್ಯ ವಸ್ತ್ರದ, ಖಾನತೋಟದ ವಿನೋದ ಗ್ಯಾನೋಸಾ ಬದ್ದಿ, ಬಾಲಾಜಿ ನಗರದ ರಾಜು ಮೋಹನಸಾ ಬಾಕಳೆ, ಶ್ರೀನಿವಾಸ ರಾಮಣ್ಣ ಬಾಂಡಗೆ, ಜೋಡ ಮಾರುತಿ ದೇವಸ್ಥಾನ ಬಳಿಯ ಪರಶುರಾಮ ಭೋಜರಾಜಸಾ ದಲಭಂಜನ, ಕಳಸಾಪುರ ರಸ್ತೆ ಬಳಿಯ ಕುಬೇರಪ್ಪ ಪರಸಪ್ಪ ಚಳ್ಳಮರದ, ಶಾಲೆ ನಂ.1ರ ಬಳಿಯ ನಿವಾಸಿ ಅಕ್ಬರಸಾಬ್ ಗಫರಸಾಬ್ ನರೇಗಲ್ ಹಾಗೂ ಖಿಲ್ಲಾ ಓಣಿಯ ರವಿ ಕೌಸಕುಮಾರ ಚವ್ಹಾಣ ಈ 8 ಜನ ಆರೋಪಿಗಳು ಅಂದರ್-ಬಾಹರ್ ಆಟದಲ್ಲಿ ತೊಡಗಿದ್ದರು.
ಗದಗ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿದ್ದು, ಇವರಿಂದ ಆಟಕ್ಕೆ ಬಳಸಿದ ಇಸ್ಪೀಟ್ ಕಾರ್ಡ್ ಹಾಗೂ 10,500 ರೂ ನಗದು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಅಪರಾಧ:0147/2023, ಕೆಪಿ ಕಾಯ್ದೆ 1963ರ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.