ಹುಬ್ಬಳ್ಳಿಯಿಂದ ಗದಗ ಕಡೆ ಬರುತ್ತಿದ್ದ ಅಕ್ರಮ ಮದ್ಯ ಜಪ್ತಿ…
Advertisement
ವಿಜಯಸಾಕ್ಷಿ ಸುದ್ದಿ, ಗದಗ
ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಲಕ್ಷಾಂತರ ರೂ. ಹಣ ಸೀಜ್ ಮಾಡಿದ್ದಾರೆ.
ಬೆಟಗೇರಿ ಸಮೀಪದ ದಂಡಿನ ದುರ್ಗಮ್ಮ ದೇವಿ ಬಳಿಯ ಗಜೇಂದ್ರಗಡ ರಸ್ತೆಯಲ್ಲಿ ಸ್ಥಾಪಿಸಿದ ಚೆಕ್ ಪೋಸ್ಟ್ ನಲ್ಲಿ ಈ ಹಣ ಸಿಕ್ಕಿದೆ.

ಗಜೇಂದ್ರಗಡ ಪಟ್ಟಣದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಕಾರಿನಲ್ಲಿ 1ಲಕ್ಷ 43 ಸಾವಿರ ರೂ. ಹಣ ಸೀಜ್ ಮಾಡಲಾಗಿದೆ.
ನಿನ್ನೆ ಹುಬ್ಬಳ್ಳಿ ರಸ್ತೆಯ ದುಂದೂರು ಬಳಿಯ ಚೆಕ್ ಪೋಸ್ಟ್ ನಲ್ಲಿ ಕೂಡ 750ML ನ 25 ಬಾಟಲ್ ಬ್ಲೆಂಡರ್ ಸ್ಪೈಡ್ ಮದ್ಯ ಪತ್ತೆಯಾಗಿದೆ.

ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಈ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಕುರಿತು ಬೆಟಗೇರಿ ಹಾಗೂ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.