ವಿಜಯಸಾಕ್ಷಿ ಸುದ್ದಿ, ಮುಂಡರಗಿ
Advertisement
ತಾಲೂಕಿನ ಮೇವುಂಡಿಯ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವೊಂದರ ಬಾಗಿಲು ಮುರಿದ ಕಳ್ಳರು, ಕೇಂದ್ರದ ಒಳಗಿದ್ದ ಒಟ್ಟೂ 24 ಸಾವಿರ ಮೌಲ್ಯದ ಕಂಪ್ಯೂಟರ್ ಪರಿಕರಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 27ರ ಸಾಯಂಕಾಲ 5ರಿಂದ ಮಾರ್ಚ್ 28ರ ಮುಂಜಾನೆ 10 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮೇವುಂಡಿಯ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ಬಾಗಿಲನ್ನು ಮೀಟಿ ಮುರಿದು ಒಳಹೊಕ್ಕು, ಅಲ್ಲಿದ್ದ 6 ಸಾವಿರ ರೂ. ಮೌಲ್ಯದ ಎನ್‌ಐಸಿ ಕಂಪನಿಯ ಮಾನಿಟರ್ ಹಾಗೂ 18 ಸಾವಿರ ರೂ. ಬೆಲೆಬಾಳುವ ಎಪ್ಸನ್ ಕಂಪನಿಯ ಕಲರ್ ಪ್ರಿಂಟರ್‌ಗಳನ್ನು ಕಳ್ಳತನ ಮಾಡಿದ್ದಾರೆ.
ಈ ಕುರಿತು ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ಕಮರುನ್ನಾ ಮೌಲಾಸಾಬ್ ನದಾಫ್ ಎಂಬುವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಡರಗಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.