ಗದಗ ಕ್ಷೇತ್ರದ ಅಭಿವೃದ್ಧಿ ಪಾಟೀಲರಿಂದ ಮಾತ್ರ ಸಾಧ್ಯ; ಸೈಯದ್ ಖಾಲಿದ್ ಕೊಪ್ಪಳ

0
Spread the love

33ನೇ ವಾರ್ಡ್ ನಲ್ಲಿ ಮತಯಾಚನೆ……

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಯುವ ಕಾಂಗ್ರೆಸ್‌ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ಅವರ ನೇತೃತ್ವದಲ್ಲಿ ನಗರದ 33ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ಕೆ ಪಾಟೀಲ್ ಪರವಾಗಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೈಯದ್ ಖಾಲಿದ್ ಕೊಪ್ಪಳ, ಪಾರದರ್ಶಕ‌ ಹಾಗೂ ಪ್ರಾಮಾಣಿಕವಾಗಿ ಗದಗ ಕ್ಷೇತ್ರದ ಅಭಿವೃದ್ಧಿ ಕೇವಲ ಎಚ್ ಕೆ ಪಾಟೀಲ್ ಅವರಿಂದ ಮಾತ್ರ ಸಾಧ್ಯ ಎಂದರು.

ಕ್ಷೇತ್ರದ ಜನರು ಈ ಬಾರಿ ಬೃಹತ್ ಮತಗಳ ಅಂತರದಿಂದ ಅವರನ್ನು ಗೆಲ್ಲಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಎಂ. ಸಿ ಶೇಖ, ಯುವ ಕಾಂಗ್ರೆಸ್ ಮುಖಂಡ ದೀಪುಗೌಡ, ನೂರಬ್ಬನವರ್, ಮುಂಬರೆಡ್ಡಿ, ತೌಶಿಫ್ ಶಿರಹಟ್ಟಿ, ಜಮೀರ್ ಮಟ್ಟಿ, ಸಮೀರ್, ಅಝರ್, ನಿಯಾಜ್ ಸೇರಿದಂತೆ ಯುವಕರು ಇದ್ದರು ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here