ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎರಡೇ ದಿನದಲ್ಲಿ ಬರೋಬ್ಬರಿ 37 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಮಂಗಳವಾರ ಒಂದೇ ದಿನ 21 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 84 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಪತ್ತೆಯಾಗಿರುವ 84 ಸೋಂಕಿನ ಪ್ರಕರಣಗಳಲ್ಲಿ ಗದಗ ತಾಲ್ಲೂಕು ಒಂದರಲ್ಲೇ 51 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಮುಂಡರಗಿಯಲ್ಲಿ 21, ನರಗುಂದದಲ್ಲಿ 01, ರೋಣದಲ್ಲಿ 06, ಶಿರಹಟ್ಟಿಯಲ್ಲಿ 04 ಪ್ರಕರಣಗಳು ಪತ್ತೆಯಾಗಿವೆ.
ಗದಗನ ವಿಎನ್‌ಟಿ ರೋಡ್, ಗಾಂಧಿನಗರ(ಸೆಟ್ಲಮೆಂಟ್), ಸಂಕಣ್ಣವರ ಬಡಾವಣೆ, ಇಮಾಮ್‌ಹುಸೇನ್ ಕಾಲನಿ, ಗದಗ ತಾಲ್ಲೂಕಿನ ಅಡವಿಸೋಮಾಪುರ ದೊಡ್ಡತಾಂಡಾ, ಮಲ್ಲಸಮುದ್ರ, ನೀರಲಗಿ, ಮುಂಡರಗಿಯ ಸ್ವಾಮಿ ವಿವೇಕಾನಂದ ನಗರ, ಕೋಟೆಭಾಗ, ಮಂಜುನಾಥ ನಗರ, ಮುಂಡರಗಿ ತಾಲ್ಲೂಕಿನ ಕೋರ್ಲಹಳ್ಳಿ, ಬೀಡನಾಳ, ಬಸಾಪುರ, ನರಗುಂದದ ಟಿಎಲ್‌ಎಚ್ ಕಚೇರಿ, ರೋಣ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸವಡಿ, ರಾಂಪೂರ ಗ್ರಾಮದ ನಿವಾಸಿಗಳು ಸೇರಿದಂತೆ 21 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಮಂಗಳವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 6,97,019 ಮಾದರಿ ಸಂಗ್ರಹಿಸಿದ್ದು, 6,70,857 ನಕಾರಾತ್ಮಕವಾಗಿವೆ. ಮಂಗಳವಾರದ 21 ಪ್ರಕರಣ ಸೇರಿ ಒಟ್ಟು 26,164 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ ಮೂವರು ಸೇರಿ ಒಟ್ಟು 25,761 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 84 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.