ವಿಜಯಸಾಕ್ಷಿ ಸುದ್ದಿ, ರೋಣ:
ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ವಾಪಸ್ ಊರಿಗೆ ಬರುತ್ತಿದ್ದ ವೇಳೆ ಕಾರು ಮತ್ತು ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ಬಾದಾಮಿ ಬಳಿ ನಡೆದಿದೆ.
ರೋಣ ತಾಲೂಕಿನ ಡ.ಸ.ಹಡಗಲಿ ಗ್ರಾಮದ
ಬಸನಗೌಡ ಶಂಬುಲಿಂಗಗೌಡ ಪಾಟೀಲ್ (55) ಕಾರು ಚಾಲಕ ಮಂಜುನಾಥ ಮಾರನಬಸರಿ ಹಾಗೂ ಸಂಗಮ್ಮ ಶರಣಪ್ಪಗೌಡ ಪಾಟೀಲ್ ಮೃತ ದುರ್ದೈವಿಗಳಾಗಿದ್ದು, ಶರಣಪ್ಪಗೌಡ ಪಾಟೀಲ್ ಹಾಗೂ ಕಮಲಮ್ಮ ರುದ್ರಗೌಡ ಪಾಟೀಲ್ ತೀವ್ರ ಗಾಯಗೊಂಡಿದ್ದಾರೆ.
ಗಾಯಾಳುಗಳು ಗದಗ ಹಾಗೂ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಡ.ಸ.ಹಡಗಲಿ ಮತ್ತು ಅರಹುಣಸಿ ಗ್ರಾಮದ ನಿವಾಸಿಗಳು ಸೋಮವಾರ ಬಾಗಲಕೋಟಿಯ ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ಮರುಳಿ ಊರಿಗೆ ಬರುತ್ತಿದ್ದರು. ಈ ವೇಳೆ ಬಾದಾಮಿಯಿಂದ ರೋಣ ಕಡೆಗೆ ಬರುತ್ತಿದ್ದಾಗ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

