ಬ್ಯಾಂಕ್‌ನಲ್ಲಿ ನಕಲಿ ಆಭರಣ ಅಡವಿಟ್ಟು ಸಾಲ ಪಡೆದ ಮತ್ತೊಂದು ಪ್ರಕರಣ ಬಯಲಿಗೆ; ದತ್ತಾತ್ರೇಯ ಬಾಕಳೆ ಸೇರಿ ನಾಲ್ವರ ವಿರುದ್ಧ ಕೇಸ್…….

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ನಕಲಿ ಬಂಗಾರವನ್ನು ಅಡವಿಟ್ಟು ಬ್ಯಾಂಕೊಂದರಿಂದ ಲಕ್ಷಾಂತರ ರೂ. ಸಾಲ ಪಡೆದು ಮೋಸವೆಸಗಿದ ಬಗ್ಗೆ ದಾಸರಗಲ್ಲಿಯ ದತ್ತಾತ್ರೇಯ ಬಾಕಳೆ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

2022ರ ಏ.25 ಹಾಗೂ 26ರಂದು ಆರೋಪಿತರಾದ ದತ್ತಾತ್ರೇಯ ಬಾಕಳೆ, ಸುಷ್ಮಾ ದತ್ತಾತ್ರೇಯ ಬಾಕಳೆ ಇವರು ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಗೋಲ್ಡ್‌ ಲೋನ್‌ ಪಡೆಯುವ ಉದ್ದೇಶದಿಂದ ಗದಗ ನಗರದ ಪಟೇಲ್‌ ರೋಡ್‌, ತಿಲಕ್‌ ಪಾರ್ಕ್‌ನ ಬೇವಿನ ಪ್ಲಾಜಾದಲ್ಲಿರುವ ಐಡಿಎಫ್‌ಸಿ ಬ್ಯಾಂಕ್‌ಗೆ ತೆರಳಿದ್ದರು.

3 ಹಾಗೂ 4ನೇ ಆರೋಪಿತರಾದ ಬ್ಯಾಂಕ್‌ನ ಆಭರಣ ಪರೀಕ್ಷಕರಾದ ಗದುಗಿನ ಮೋಹನ ಶೇಷಪ್ಪ ಪ್ಯಾಟಿ, ಅರುಣ ವೆರ್ಣೇಕರ ಇವರನ್ನು ಆಭರಣ ಪರೀಕ್ಷೆಗಾಗಿ ಬ್ಯಾಂಕ್‌ಗೆ ಕರೆಯಿಸಿದಾಗ 1 ಹಾಗೂ 2ನೇ ಆರೋಪಿಗಳೊಂದಿಗೆ ಶಾಮೀಲಾಗಿ, ಸದರಿ ಆಭರಣಗಳು 20/21 ಕ್ಯಾರಟ್‌ನ ಬಂಗಾರದ ಆಭರಣಗಳೆಂದು ಸುಳ್ಳು ಪ್ರಮಾಣಪತ್ರ ನೀಡಿದ್ದರು.

ಹೀಗೆ ಒಟ್ಟೂ 408 ಗ್ರಾಂ. ನಕಲಿ ಬಂಗಾರದ ಆಭರಣಗಳನ್ನು ಅಡವಿಟ್ಟು ಬ್ಯಾಂಕಿನಿಂದ ಒಟ್ಟೂ 14,07,600 ರೂ. ಗೋಲ್ಡ್‌ ಲೋನ್‌ ಪಡೆದು ಬ್ಯಾಂಕ್‌ಗೆ ಮೋಸವೆಸಗಿದ್ದಾರೆ ಎಂದು ಬ್ಯಾಂಕ್‌ನ ಮ್ಯಾನೇಜರ್‌, ಬೆಟಗೇರಿಯ ಶಿವಾನಂದ ಗವಿಸಿದ್ದಪ್ಪ ಹಂದ್ರಾಳ ಮೇಲಧಿಕಾರಿಗಳ ಆದೇಶದಂತೆ ದೂರು ನೀಡಿದ್ದಾರೆ.

0051/2023, IPC 1860ರ ಕಲಂ 120ಬಿ, 197,198,420,34,36 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here