ವಿಜಯಸಾಕ್ಷಿ ಸುದ್ದಿ, ಲಿಂಗಸುಗೂರು
Advertisement
ಬೈಕ್ ಹಾಗೂ ಸಾರಿಗೆ ಸಂಸ್ಥೆಯ ಬಸ್ ನಡುವೆ ಡಿಕ್ಕಿ ಸಂಭವಿಸಿ ತಂದೆ-ಮಗ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ತಾಲೂಕಿನ ವಂದಲಿ ಹೊಸೂರು ಬಳಿ ನಡೆದಿದೆ.
ಬೈಕ್ ನಲ್ಲಿ ಬೆಳಿಗ್ಗೆ ಮೇವು ತರಲು ಹೋಲಕ್ಕೆ ಹೋಗಿದ್ದ ತಂದೆ ರಮೇಶ್ (35) ಮಗ ಅಮರೇಶ್ (11) ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹಟ್ಟಿಯಿಂದ ದೇವದುರ್ಗದ ಕಡೆ ಸಾರಿಗೆ ಬಸ್ ಹೊರಟಿತ್ತು ಎನ್ನಲಾಗಿದೆ. ಮೃತರಿಬ್ಬರೂ ವಂದಲಿ ಹೊಸೂರು ನಿವಾಸಿಗಳು ಎನ್ನಲಾಗಿದೆ.
ಸುದ್ದಿ ತಿಳಿದು ಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.