ವಿಜಯಸಾಕ್ಷಿ ಸುದ್ದಿ, ಹಾವೇರಿ
ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಾಣಿಕೆ ಮಾಡ್ತಿದ್ದ ನಾಲ್ವರನ್ನು ಹಾನಗಲ್ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಎಂಬತ್ತೈದು ಲಕ್ಷ ರೂಪಾಯಿ ಹಣ ಜಪ್ತಿ ಮಾಡಲಾಗಿದೆ.
ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ಮಾಡಲಾಗುತ್ತದೆ ಎಂಬ ಖಚಿತವಾಗಿ ಬಂದ ಮಾಹಿತಿ ಆಧರಿಸಿ ಹಾನಗಲ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಜೀವದ ಹಂಗು ಲೆಕ್ಕಿಸದೆ ಚಲಿಸುತ್ತಿದ್ದ ಕಾರ ತಡೆಯಲು ಪೊಲೀಸರು ಮುಂದಾದಾಗ ಆರೋಪಿಗಳು, ಕಾರ ಸ್ಪೀಡ್ ಮಾಡಿದ್ದಾರೆ, ಆಗ ಕಾರ ಹಿಡಿಯಲು ಪ್ರಯತ್ನ ಮಾಡುತ್ತಿದ್ದ ಓರ್ವ ಪೊಲೀಸ್ ಕೆಳಕ್ಕೆ ಬಿದ್ದ ಘಟನೆಯು ನಡೆದಿದೆ. ಇದರಿಂದ ಎದೆಗುಂದದ ಪೊಲೀಸರು, ಕಾರ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ಬ್ಯಾಗಿನಲ್ಲಿ ತುಂಬಿಟ್ಟಿದ್ದ ಐನೂರು, ಇನ್ನೂರು, ನೂರು ಮತ್ತು ಐವತ್ತು ರೂಪಾಯಿಗಳ ಮುಖ ಬೆಲೆಯ ಎಂಬತ್ತೈದು ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.
ನೀಲಿ ಬಣ್ಣದ ಗ್ಲಾಂಜಾ ಕಾರಿನಲ್ಲಿ ಈ ಅಕ್ರಮ ಹಣ ಆರೋಪಿಗಳು ಸಾಗಿಸುತ್ತಿದ್ದರು ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್ (31) ಇಮ್ರಾನ್ ಖಾನ್ (27) ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್ (23) ಮತ್ತು ಸಯ್ಯದ ಅಮೀನ್ (29) ಬಂಧಿತ ಆರೋಪಿಗಳು.
ಎಸ್ಪಿ ಹನುಮಂತರಾಯ ಅವರು ನೀಡಿದ ಮಾಹಿತಿ ಮೇರೆಗೆ ಹಾನಗಲ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಹಾನಗಲ್ ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಈ ಕಾ ಕಾರ್ಯಾಚರಣೆಯಲ್ಲಿ ಇದ್ದರು.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.