ವಿಜಯಸಾಕ್ಷಿ ಸುದ್ದಿ, ಗದಗ
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಯಾದ ಕಳಸಾಪೂರ, ನಾಗಾವಿ, ನಾಗಾವಿ ತಾಂಡಾದ ಹಲವು ಪ್ರದೇಶಗಳಿಗೆ ಶಾಸಕ ಎಚ್.ಕೆ.ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ ಎದಕ ಬರ್ತಾರಿಲ್ಲಿ, ದನ ಕಾಯಾಕ ಬಂದಾನೇನ ಅಂವ; ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ಲೆಫ್ಟ್ ರೈಟ್
ನಾಗಾವಿ ತಾಂಡಾದಲ್ಲಿ ಭಾರಿ ಪ್ರಮಾಣದಲ್ಲಿ ಒಡೆದ ಸೇತುವೆಯನ್ನು ವೀಕ್ಷಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮೂಲ ಸೌಕರ್ಯ ಸೇರಿದಂತೆ ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ
ಪ್ರಮುಖವಾಗಿ ಕುಡಿಯುವ ನೀರು ಕಾಮಗಾರಿಯ ಪೈಪ್‌ಲೈನ್ ಹಾಳಾಗಿದ್ದು, ನೀರು ಪೂರೈಕೆಗಾಗಿ ಬೋರ್‌ವೆಲ್ ಕೊರೆಸಲು ಪ್ರವಾಹದ ವಿಶೇಷ ಅನುದಾನ ಬಿಡುಗಡೆಗೊಳಿಸಲು ಸೂಚಿಸಿದರು.
ರಸ್ತೆ ಸಂಪೂರ್ಣ ಹಾಳಾಗಿದ್ದು ಮಕ್ಕಳು ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿಪಡಿಸಲು ಆಗ್ರಹಿಸಿದರು.
ನಾಗಾವಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ಮನೆ, ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳನ್ನು ಎಚ್.ಕೆ.ಪಾಟೀಲ ವೀಕ್ಷಿಸಿದರು.
ಈ ಸಂದರ್ಭದಲ್ಲಿ ವಾಸಣ್ಣ ಕುರಡಗಿ, ಬಿ.ಆರ್.ದೇವರಡ್ಡಿ, ಸಿದ್ದು ಪಾಟೀಲ, ಬಿ.ವಿ.ಸುಂಕಾಪೂರ, ತಹಸೀಲ್ದಾರ ಕಿಶನ್ ಕಲಾಲ, ಸಹಾಯಕ ತೋಟಗಾರಿಕೆ ಅಧಿಕಾರಿ ಶೈಲೇಂದ್ರ ಬಿರಾದಾರ, ಕೃಷಿ ಅಧಿಕಾರಿ ರವಿ, ತಾಪಂ ಇ ಓ ಧರ್ಮೇಂದ್ರ ನಾಗಾವಿ, ಕಳಸಾಪೂರ ಗ್ರಾಪಂ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.