ವಿಜಯಸಾಕ್ಷಿ ಸುದ್ದಿ, ಗದಗ
ರಾಜಕೀಯ ಮರೆತು ಮತಕ್ಕೋಸ್ಕರ ಬಡಿದಾಡಿ ಸಾವನ್ನಪ್ಪಿದಾಗ ಶಾಸಕರು, ಸಚಿವರು, ರಾಜಕೀಯ ಮುಖಂಡರು ಆ ಸಾವಿನ ಮನೆಯ ಮುಂದೆ ಕಾರ್ಯಕ್ರಮ ಮಾಡಿದ್ದು ರಾಜ್ಯದ ಇತಿಹಾಸ.
ಆದರೆ ನಮ್ಮ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡರಗಿ ಪೊಲೀಸ್ ಠಾಣೆಯ ನಾಗರಹಳ್ಳಿ ಮತ್ತು ಹಮ್ಮಿಗಿ ಗ್ರಾಮದ ಸಿಬ್ಬಂದಿಗಳಿಬ್ಬರು ಸಾರ್ವಜನಿಕರಿಗಾಗಿ ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾದರು.
ಇದನ್ನೂ ಓದಿ ಕೊನೆಗೂ ಶವವಾಗಿ ಪತ್ತೆಯಾದ ಮಹೇಶ್; ಇಲಾಖೆಗೆ ಜೊತೆಯಲ್ಲಿ ಸೇರಿ, ಜೊತೆಯಾಗಿ ಇಹಲೋಕ ತ್ಯಜಿಸಿದ ಸ್ನೇಹಿತರು!
ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಯಾವೊಬ್ಬ ರಾಜಕೀಯ ನಾಯಕರೂ ಭಾಗಿಯಾಗದಿರುವದು ನಮ್ಮ ನಿಮ್ಮೆಲ್ಲರ ದುರ್ದೈವ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರ ದುದುಪೀರ ಹಣಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಅಥವಾ ಹಿತೈಷಿಗಳು ಮರಣ ಹೊಂದಿದಾಗ, ಆಯಾ ಪಕ್ಷದ ಶಾಸಕರು, ಮುಖಂಡರುಗಳು ಓಡಿಹೋಗಿ ಮಾಲೆ ಹಾಕಿ ನಮನ ಸಲ್ಲಿಸಿ ಬರುವುದು ಸಂಪ್ರದಾಯ. ಆದರೆ ಜನಸೇವೆಗಾಗಿಯೇ ಪ್ರಾಣತೆತ್ತ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ ವಕ್ರದ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನು ಘಟನೆ ನಡೆದು ಮೂರು ದಿನ ಕಳೆದರೂ ಯಾವ ಪಕ್ಷದ ರಾಜಕಾರಣಿಗಳೂ ಮಾಡಿಲ್ಲ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಇಬ್ಬರೂ ಸಿಬ್ಬಂದಿಗಳು ಅತ್ಯಂತ ಬಡತನದಲ್ಲಿಯೂ ಕಷ್ಟಪಟ್ಟು ಕಲಿತು ಸ್ವಸಾಮರ್ಥ್ಯದಿಂದಲೇ ನೌಕರಿ ಪಡೆದವರು. ಕನಿಷ್ಠಪಕ್ಷ ಪೊಲೀಸ್ ಹುದ್ದೆಗೆ ಗೌರವ ಕೊಟ್ಟಾದರೂ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಬಹುದಿತ್ತು.
ಮೃತರ ಕುಟುಂಬದವರು ಆರ್ಥಿಕ ಸಹಕಾರವನ್ನೇನೂ ಕೇಳುವದಿಲ್ಲ. ಅವರು ಬಯಸುವದು ‘ಬೆಂಬಲಕ್ಕೆ ನಾವಿದ್ದೇವೆ’ ಎಂಬ ಧೈರ್ಯ ತುಂಬುವ, ಸಾಂತ್ವನದ ಮಾತುಗಳನ್ನಷ್ಟೇ. ಆದ್ದರಿಂದ ರಾಜಕೀಯ ಮುಖಂಡರು ಈಗಲಾದರೂ ಅವರ ಮನೆಗೆ ತೆರಳಿ ಒಂದೆರಡು ಸಾಂತ್ವನದ ಮಾತುಗಳನ್ನಾದರೂ ಹೇಳಿಬರಲಿ ಎಂಬ ಆಶಯವನ್ನು ದುದುಪೀರ ಹಣಗಿ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಗೃಹ ಮಂತ್ರಿಯಾದ ಆರಗ ಜ್ಞಾನೇಂದ್ರ್ ಅವರು ಎಲ್ಲೆಲ್ಲಿ ಹೋಗಿ ಬೊಂಬೆ ಹೊಡೆಯೋ ಟೈಮಿನಲ್ಲಿ ಇಂಥ ನಿಮ್ಮ ಇಲಾಖೆಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮೂರ್ತಪಟ್ಟಿದ್ದಾರೆ ಇಂಥವರಿಗೆ ಸಹಾಯ ದಾನ ಮಾಡಲು ಆ ಮನೆಗೆ ಶಾಂತನ ಹೇಳಲು ಹೋಗಿಲ್ಲ ಅದೇ ಯಾವುದಾದರೂ ನಿಮ್ಮ ಕಾರ್ಯಕರ್ತರು ಸತ್ತರೆ ಬೇಗನೆ 20 ಲಕ್ಷ 30 ಲಕ್ಷ ಪರಿಹಾರ ಕೊಡುತ್ತೀರಿ ನಾಚಿಕೆ ಆಗಲ್ವಾ ನಿಮಗೆ ಯಾಕ ಮಂತ್ರಿ ಆಗಿದ್ದೀರಿ ರಾಜೀನಾಮೆ ಕೊಟ್ಟು ತೊಲಗಿ ಇಲ್ಲವಾದರೆ ಆ ಮನೆಗೆ ಹೋಗಿ ಸಾಂತ್ವನ ಹೇಳಲು ಗೋರ್ಮೆಂಟ್ ಬಸ್ ಇದೆ ಅದರಲ್ಲಿ ಆದರು ಹೋಗಿಬನ್ನಿ