ಗ್ರಾಮೀಣ ಪೊಲೀಸರ ಕಾರ್ಯಾಚರಣೆ….
ವಿಜಯಸಾಕ್ಷಿ ಸುದ್ದಿ, ಗದಗ
ದೇವಸ್ಥಾನದ ಮುಂಬಾಗದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಸೆಕ್ಯೂರಿಟಿ ಗಾರ್ಡ್, ವರ್ತಕ, ಪ್ಲಂಬರ್ ಸೇರಿದಂತೆ ಹತ್ತು ಜನರನ್ನು ಬಂಧಿಸಿರುವ ಗ್ರಾಮೀಣ ಪೊಲೀಸರು ಒಂದು ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡ ಘಟನೆ ಜರುಗಿದೆ.
ಗದಗ ತಾಲೂಕಿನ ದುಂದೂರು ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಉಮೇಶ್ ನಿಂಗಪ್ಪ ಕೌಜಗೇರಿ, ಮಂಜುನಾಥ ಶಂಕ್ರಪ್ಪ ಅಕ್ಕಿ, ರುದ್ರಪ್ಪ ಹನಮಪ್ಪ ತಳವಾರ, ಬಸವರಾಜ್ ಶಿವಪ್ಪ ಚುರ್ಚಿಹಾಳ, ಸುರೇಶ್ ಪಕ್ಕೀರಪ್ಪ ದುಂದೂರು, ಮುತ್ತು ಯಲ್ಲಪ್ಪ ಓಲೇಕಾರ, ಶ್ರೀನಿವಾಸ್ ಭೋಜಪ್ಪಗೌಡ ಮರಿಯಪ್ಪಗೌಡ್ರ, ರಾಮನಗೌಡ ಹನುಮಂತಗೌಡ ಪಾಟೀಲ, ಚಂದ್ರಪ್ಪ ದೇವೇಂದ್ರಪ್ಪ ವಾಲೀಕರ ಹಾಗೂ ಯಲ್ಲಪ್ಪ ಹನಮಪ್ಪ ಯಾವಗಲ್ ಎಂಬುವವರನ್ನು ಗದಗ ಗ್ರಾಮೀಣ ಪೊಲೀಸ್ ಠಾಣೆಯ ಕಿರಣ್‌ಕುಮಾರ್ ಕೆ.ಎಸ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತರಿಂದ 1 ಲಕ್ಷ 15 ಸಾವಿರ ದ ಇಪ್ಪತ್ತು ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಕಲಂ 87ಕೆ.ಪಿ ಆ‌್ಯಕ್ಟ್ ಕ್ರೈಮ್ ನಂ. 279/2023, ಎನ್.ಸಿ 44/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.