ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಮುಂಬೈನ ವ್ಯಕ್ತಿಯೊಬ್ಬ ಗಣ್ಯ ವ್ಯಾಪಾರಿಯೊಬ್ಬರಿಗೆ ಗ್ಯಾಸ್ ಡೀಲರ್ ಶಿಪ್ ಕೊಡುವುದಾಗಿ ಹಣ ಪಡೆದು ಮೋಸ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುಂಡರಗಿಯ ಗಣ್ಯ ವ್ಯಾಪಾರಸ್ಥ ರಾಜಕುಮಾರ ಪರುತಪ್ಪ ಮುಳ್ಳೂರು ಎಂಬುವವರಿಗೆ ಮುಂಬೈನ ಆಶೀಸ್ ಶಿಂಕ್ಲಾ ಎಂಬಾತ 2020 ಆಗಸ್ಟ್ ತಿಂಗಳಿನಲ್ಲಿ ಫೇಸ್‌ಬುಕ್ ನಲ್ಲಿ ವಿವಿಧ ಗ್ಯಾಸ್ ಡೀಲರ್ ಶಿಪ್ ಗಾಗಿ ಜಾಹೀರಾತು ನೀಡಿ ಆನ್ಲೈನ್ ಅರ್ಜಿ ಹಾಕಲು ತಿಳಿಸಿದ್ದ.
ಜಾಹೀರಾತು ಗಮನಿಸಿದ ಸ್ಥಳೀಯ ವ್ಯಾಪಾರಸ್ಥ ರಾಜಕುಮಾರ ಎಂಬುವವರು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿದ್ದರು. ಆದಾದ ನಂತರ ವ್ಯಾಪಾರಿ ರಾಜಕುಮಾರ ಅವರಿಗೆ ಆರೋಪಿ ಆಶೀಸ್, ಫಾರ್ಮ್ ಫೀಸ್, ಪ್ರೊಸೆಸ್ಸಿಂಗ್ ಫೀಸ್, ಜಿಎಸ್ಟಿ, ಎನ್ಒಸಿ ಅಂತ ಹೇಳಿ ಹಂತ -ಹಂತವಾಗಿ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 16ಲಕ್ಷ , 22 ಸಾವಿರ ರೂ,ಗಳನ್ನು ನೆಫ್ತ್ ಹಾಗೂ ಫೋನ್ ಪೇ ಮೂಲಕ ವರ್ಗಾವಣೆ ಮಾಡಿಸಿಕೊಂಡು ಗ್ಯಾಸ್ ಡೀಲರ್ ಶಿಪ್ ಕೊಡದೇ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾನೆ.
ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ ಆರೋಪಿ ಆಶೀಸ್ ಬಂಧನಕ್ಕೆ ಜಾಲ ಬೀಸಿದ್ದಾರೆ.