ಕಪ್ಪತಗುಡ್ಡದ ಪರಿಸರಕ್ಕೆ ಹಾನಿ: ಗುಡ್ಡದ ತುಂಬ ಪ್ಲಾಸ್ಟಿಕ್ ತ್ಯಾಜ್ಯ…..ಪ್ರವಾಸಿಗರಿಗೆ ಕಪ್ಪತಗುಡ್ಡ ಪ್ರವೇಶಕ್ಕೆ ನಿರ್ಬಂಧ…..
ವಿಜಯಸಾಕ್ಷಿ ಸುದ್ದಿ, ಗದಗ
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧವಾಗಿರುವ ಕಪ್ಪತಗುಡ್ಡದ ಪರಿಸರಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಂದ ಸಾಕಷ್ಟು ಹಾನಿಯಾಗುತ್ತಿದ್ದು, ಕಪ್ಪತಗುಡ್ಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕಪ್ಪತಗುಡ್ಡ ಪರಿಸರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಈ ತಾಣ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಗುಡ್ಡದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗದಿಂದ ನಿಸರ್ಗ ಪ್ರಿಯರು ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ; ನೂಕು-ನುಗ್ಗಲು, ಗಲಾಟೆ, ಚುನಾವಣೆ ಮುಂದೂಡಿಕೆ
ಹೀಗೆ ಭೇಟಿ ನೀಡುವ ಪ್ರವಾಸಿಗರು ಹದ್ದು ಮೀರಿ ವರ್ತಿಸುತ್ತಿದ್ದಾರೆ. ಮದ್ಯಪಾನ ಮಾಡಿ ಅರಣ್ಯ ಪ್ರದೇಶಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಬೈಕ್, ಜೀಪ್‌ಗಳಲ್ಲಿ ತಂಡೋಪತAಡವಾಗಿ ಆಗಮಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಕಪ್ಪತಗುಡ್ಡದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ.

ಪ್ರವಾಸಿಗರ ವರ್ತನೆ ಪ್ರಾಣಿ-ಪಕ್ಷಿಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಕಪ್ಪತಗುಡ್ಡ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ ಕೂಡಿ ಹಾಕಿ ಆಕ್ರೋಶ….
ಕಪ್ಪತಗುಡ್ಡ ವನ್ಯಜೀವಿ ಧಾಮವೂ ಆಗಿರುವುದಿರಂದ, ಅರಣ್ಯ ಪ್ರದೇಶದೊಳಗೆ ಪೂರ್ವಾನುಮತಿ ಪಡೆಯದೆ ಪ್ರವೇಶ ಮಾಡುವುದು ನಿಷಿದ್ಧ.

ಆದರೂ ನಿಸರ್ಗಾಸಕ್ತರು, ಪ್ರವಾಸಿಗರು ಕಪ್ಪತಗುಡ್ಡವನ್ನು ನೋಡಿ ಆನಂದಿಸಲಿ ಎಂದು ಒಂದಷ್ಟು ವಿನಾಯಿತಿ ನೀಡಲಾಗಿತ್ತು. ಇದರಿಂದ ಗುಡ್ಡದ ಪರಿಸರಕ್ಕೆ ಹಾನಿ ಆಗುತ್ತಿರುವುದರಿಂದ ಮತ್ತು ಅತಿಯಾದ ಮಳೆಯಿಂದ ಗುಡ್ಡದ ಮಣ್ಣು ಕುಸಿಯುತ್ತಿರುವುದರಿಂದ ಮುಂದಿನ ಆದೇಶದವರೆಗೆ ಡೋಣಿ ಮಾರ್ಗವಾಗಿ ಕಪ್ಪತ್ತಗುಡ್ಡ ಗಾಳಿಗುಂಡಿಗೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಕಪ್ಪತಹಿಲ್ಸ್ ವಲಯ ಅರಣ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.