ವಿಜಯಸಾಕ್ಷಿ ಸುದ್ದಿ, ಬೆಟಗೇರಿ
ಸಮೀಪದ ನರಸಾಪೂರ ಕೆ.ಐ.ಡಿ.ಬಿ ಪ್ಲಾಟ್ ನ ಗುದಾಮವೊಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ ಆರೋಪದಲ್ಲಿ ಬೆಟಗೇರಿಯ ತಿಮ್ಮಯ್ಯ ತಂದೆ ವೀರಣ್ಣ ಕೊಂಗಾಟಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಮನೆ ಮನೆಗೆ ತೆರಳಿ ಖರೀದಿಸಿ ಬೇರೆ ಬೇರೆ ಚೀಲಗಳಲ್ಲಿ ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಿ ಅಧಿಕ ಲಾಭ ಗಳಿಸುವ ಉದ್ದೇಶ ಆರೋಪಿ ತಿಮ್ಮಯ್ಯ ಹೊಂದಿದ್ದನು.
ಇದನ್ನೂ ಓದಿ ಪಾರ್ವತಿ ಪೆಟ್ರೋಲಿಯಂ ಮಾಲೀಕರ ಮೇಲೆ ಚೀಟಿಂಗ್ ಕೇಸ್ ; ತಪ್ಪಾಗಿ ಜಮಾ ಆದ ಹಣ ಮರಳಿಸದೇ ವಂಚನೆ ಆರೋಪ….
ಸುಮಾರು 2 ಲಕ್ಷ 64 ಸಾವಿರದ 316 ರೂಪಾಯಿಗಳ ಮೌಲ್ಯದ 77ಕ್ವಿಂಟಾಲ್ 74 ಕೆ.ಜಿ ಅಕ್ಕಿ ಜಪ್ತಿ ಮಾಡಲಾಗಿದೆ.
ಈ ಕುರಿತು ಆಹಾರ ಇಲಾಖೆಯ ಅಧಿಕಾರಿ ಸುವರ್ಣ ಮುಕ್ಕಣ್ಣ ಜಮ್ಮನಕಟ್ಟಿ ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, (ಅಗತ್ಯ ಸರಕುಗಳ ಕಾಯ್ದೆ) ESSENTIAL COMMODITIES ACT, 1955(U/s-7,3): PDS CONTROLLING ORDER , 1992 (U/s-18(2)) ಅಡಿಯಲ್ಲಿ
0049/2023ರಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.