ವಾಹನ ಸಮೇತ ವಶಕ್ಕೆ ಪಡೆದ ಪೊಲೀಸರು…..
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ವಾಹನ ಸಮೇತ ಸೆರೆ ಹಿಡಿಯಲಾಗಿದೆ.
ಸೋಮವಾರ ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ತಾಲೂಕಿನ ತಂಗೋಡ ದಾಟಿ ಹೊಳೆಇಟಗಿ ಕಡೆಗೆ ಅಶೋಕ್ ಲೇಲ್ಯಾಂಡ್ ಕಂಪನಿಯ ದೋಸ್ತ್ ಪ್ಲಸ್ ಎಲ್.ಎಸ್ ಗೂಡ್ಸ್ ವಾಹನ ನಂಬರ್ ka26/b3123 ನೇದ್ದರ ಚಾಲಕ ಮುಂಡರಗಿ ತಾಲೂಕಿನ ಶಿಂಗಟಾಲೂರಿನ ನಾಗರಾಜ್ ತಂದೆ ಹನಮಂತಪ್ಪ ಸಣ್ಣಕಲ್ಲ, ಮುಂಡರಗಿ ಪಟ್ಟಣದ ಮಹಮ್ಮದ್ ಇರ್ಪಾನ್ ತಂದೆ ಭಾಷಾಸಾಬ ಲಕ್ಕುಂಡಿ ಹಾಗೂ ಮುಂಡರಗಿ ತಾಲೂಕಿನ ಹೆಸರೂರ ಗ್ರಾಮದ ಲಕ್ಷ್ಮಣ ತಂದೆ ಗರಡಪ್ಪ ಹರಿಜನ ಎಂಬ ಮೂವರು ಎಲ್ಲಂದಿಲೋ ಅಕ್ರಮವಾಗಿ ಅಕ್ಕಿ ಖರೀದಿಸಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದಾರೆ.

ಸುಮಾರು 83,300ರೂ.ಗಳ ಮೌಲ್ಯದ 24ಕ್ವಿಂಟಾಲ್ 50ಕೆಜಿ ತೂಕದ 49 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದರು.
ಈ ಕುರಿತು ಈ ಮೂವರು ಆರೋಪಿಗಳ ಮೇಲೆ ಕಲಂ:03 ಮತ್ತು 07. ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕಲಂ:18 ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶ 2016ರ ಪ್ರಕಾರ ಶಿರಹಟ್ಟಿ ಆಹಾರ ನಿರೀಕ್ಷಕರಾದ ಮಂಜುಳಾ ಈರಪ್ಪ ಆಕಳದ ದೂರು ನೀಡಿದ್ದು, c/no-0146/2023 ದಾಖಲಾಗಿದೆ.