ಡಿವೈಎಸ್ಪಿ ನೇತೃತ್ವದಲ್ಲಿ ನೂರಾರು ಪೊಲೀಸರ
Advertisement
ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಹಲವು ದಿನಗಳಿಂದ ಅವಳಿ ನಗರದಲ್ಲಿ ಹೆಚ್ಚುತ್ತಿರುವ ಪುಂಡ ಪೋಕರಿಗಳ ಹಾವಳಿ ತಡೆಗಟ್ಟಲು ಪೊಲೀಸರು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಿದ್ದಾರೆ.
ಒಂದೇ ವಾರದಲ್ಲಿ ಚಾಕು ಇರಿತದ ಎರಡು ಪ್ರಕರಣಗಳು ನಡೆದ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ನೇತೃತ್ವದಲ್ಲಿವ ಹಲವು ಪ್ರದೇಶಗಳಲ್ಲಿ ಮನೆ ಮೆನೆಗಳ ಸರ್ಚಿಂಗ್ ನಡೆಸಿದರು.
ಗದಗ ಶಹರ ಹಾಗೂ ಬೆಟಗೇರಿ ಠಾಣೆಯ ನೂರಾರು ಪೊಲೀಸರು, ಕಮ್ಮಾರ ಸಾಲ ಹಾಗೂ ರಂಗನವಾಡಿ ಗಲ್ಲಿಯ ಅನುಮಾನಾಸ್ಪದ ಮನೆಗಳಲ್ಲಿ ಶೋಧ ನಡೆಸಿದ್ದು, ಕೆಲ ಮನೆಗಳಲ್ಲಿ ಚಾಕು, ಕಂದ್ಲಿಗಳು ಹಾಗೂ ರಾಡ್ ಪತ್ತೆಯಾಗಿವೆ ಎನ್ನಲಾಗಿದೆ.
ಇಬ್ಬರು ಸಿಪಿಐ, ಪಿಎಸ್ಐ ಸೇರಿದಂತೆ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಇದ್ದರು.