ವಿಜಯಸಾಕ್ಷಿ ಸುದ್ದಿ, ಗದಗ
Advertisement
ಗದಗ ಜಿಲ್ಲಾ ಯುವ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷ ಹಾಗೂ ಎಸ್ ಎಸ್ ಕೆ.ಸಮಾಜದ ಯುವ ಮುಖಂಡ ರಮೇಶ ಎನ್. ಕಲಬುರ್ಗಿ ಇವರನ್ನು ಗದಗ ಜಿಲ್ಲಾ ಜೆಡಿಎಸ್ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ಕೇಂದ್ರದ ಮಾಜಿ ಸಚಿವರೂ, ಜೆಡಿಎಸ್ ರಾಜ್ಯ ಅಧ್ಯಕ್ಷರೂ ಆದ ಸಿ ಎಂ.ಇಬ್ರಾಹಿಂ ಅವರು ಆದೇಶ ಹೊರಡಿಸಿದ್ದಾರೆ.
ಇವರ ನೇಮಕಕ್ಕೆ ಜಿಲ್ಲಾ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಜಿಲ್ಲಾ ಕಾರ್ಯ್ಯಾಧ್ಯಕ್ಷ ಎಂ ಆರ್. ಸೋಂಪೂರ, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ, ರೊಣ, ಮುಂಡರಗಿ, ನರಗುಂದ ತಾಲೂಕು ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.