ಬಂಧಿತರು ಲಕ್ಷ್ಮೇಶ್ವರ ನಿವಾಸಿಗಳು….
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಗೇರಿ, ಪು. ಬಡ್ನಿಯಲ್ಲಿ ಮನೆ ಕಳ್ಳತನ ಮಾಡಿದ್ದ ಹನುಮಂತ ಕುಂಚಿಕೊರವರ, ಮಂಜುನಾಥ ಬಿಸಕಲ್ಲವಡ್ಡರ ಎಂಬುವರನ್ನು ಲಕ್ಷ್ಮೇಶ್ವರದ ಇಟ್ಟಿಕೆರೆಯ ದಂಡೆಯ ಗುಡಿಸಲ ಬಳಿ ಕಾರ್ಯಚರಣೆ ನಡೆಸಿ ಕಳ್ಳರನ್ನು ಬಂಧಿಸಲಾಗಿದೆ.
ಬಂಧಿತರಿಂದ ಬಂಗಾರದ ಕಿವಿ ಓಲೆ, ಬೆಳ್ಳಿ ಪೆಂಡೆದ ಗೆಜ್ಜೆ, ಬೆಳ್ಳಿ ಬ್ರಾಸಲೆಟ್, ಎರಡು ಜೊತೆ ಬೆಳ್ಳಿ ಕಾಲು ಚೈನ್, 15 ಗ್ರಾಮ್‌ನ ಬಂಗಾರದ ಚೈನ್, 12 ಗ್ರಾಮ್ ತೂಕದ ಬಂಗಾರದ ನೆಕ್ಲೆಸ್, 20 ಗ್ರಾಮ್‌ನ ಎರಡು ಬೆಳ್ಳಿ ಕಾಲು ಚೈನ್, 1 ಬೆಳ್ಳಿ ಗುಡಗಡಗಿ, ಬೆಳ್ಳಿಯ ಚೈನ್ ಹೀಗೆ ಒಟ್ಟು 35 ಗ್ರಾಮ್ ಬಂಗಾರದ ಆಭರಣಗಳ ಅಂದಾಜು ಮೊತ್ತ 1 ಲಕ್ಷ 6500 ರೂ ಹಾಗೂ 300 ಗ್ರಾಮ್ ತೂಕದ ಬೆಳ್ಳಿ ಆಭರಣಗಳ ಅಂದಾಜು ಕಿಮ್ಮತ್ತು 32,500 ರೂ ಸೇರಿದಂತೆ ಒಟ್ಟು 1.39 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಪೊಲೀಸರು ವಸಪಡಿಸಿಕೊಂಡಿದ್ದಾರೆ.
ಗದಗ ಜಿಲ್ಲಾ ಎಸ್‌ಪಿ, ಡಿಎಸ್‌ಪಿ ಹಾಗೂ ಸಿಪಿಐ ವಿಕಾಸ ಲಮಾಣಿ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಯೂಸೆಪ್ ಜಮೂಲಾ, ಕ್ರೈಮ್ ಪಿಎಸ್‌ಐ ವಿ. ಜಿ. ಪವಾರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಎಎಸ್‌ಐಗಳಾದ ಎನ್ ಎ ಮೌಲ್ವಿ, ಟಿ ಕೆ ರಾಠೋಡ್, ವೈ ಎಸ್ ಕುಬಿಹಾಳ, ಜಿ ಎಂ ಬೂದಿಹಾಳ, ಸಿಬ್ಬಂದಿಗಳಾದ ಎಂ ಎ ಶೇಖ್, ಎಂ ಡಿ ಲಮಾಣಿ, ಎಂ ಎಸ್ ಬಳ್ಳಾರಿ, ಸಿ ಎಸ್ ಮಠಪತಿ, ಡಿ ಎಸ್ ನದಾಫ್, ಜಿ ಆರ್ ಗ್ರಾಮ ಪುರೋಹಿತ್, ಎಚ್ ಐ ಕಲ್ಲಣ್ಣವರ, ಸಂಜೀವ ಕೊರಡೂರ, ಎಫ್ ಸಿ ತಡಿಸಿ, ಮಂಜು ಲಮಾಣಿ, ಎಂಎಸ್ ಅಂಗಡಿ, ಎಂ ಎಚ್ ಐಗಾರ, ಅಪ್ಪಣ್ಣ ರಾಠೋಡ್, ಹನುಮರೆಡ್ಡಿ ತಾರಿಕೊಪ್ಪ, ಕೆಬಿ ಹುಲಗೂರು ಪಾಲ್ಗೊಂಡಿದ್ದರು.
ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.