ನಿನ್ನೆ ರಾತ್ರಿ ಪತ್ತೆಯಾಗಿದ್ದ ಚಿರತೆ…….

ವಿಜಯಸಾಕ್ಷಿ ಸುದ್ದಿ, ಗದಗ
ಭಾನುವಾರ ರಾತ್ರಿ ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಆರಾಮದಾಯಕವಾಗಿ ವಿಶ್ರಾಂತಿ ಸ್ಥಿತಿಯಲ್ಲಿ ಕಂಡಿದ್ದ ಚಿರತೆ ಇನ್ನೂ ಪತ್ತೆಯಾಗಿಲ್ಲ.

ನಿನ್ನೆ ರಾತ್ರಿಯಿಂದ ಬಿಂಕದಕಟ್ಟಿ, ಅಸುಂಡಿ ಗ್ರಾಮದ ಜನರ ನಿದ್ದೆಗೆಡಿಸಿರುವ ಚಿರತೆ, ಅರಣ್ಯ ಇಲಾಖೆಯ ಅಧಿಕಾರಿಗಳ ರಾತ್ರಿಯಿಡೀ ಶೋಧ ನಡೆಸಿದರು ಚಿರತೆ ಇರುವಿಕೆ ಪತ್ತೆಯಾಗಿಲ್ಲ.
ಇದನ್ನೂ ಓದಿ ಗದಗ ಸಮೀಪ ಚಿರತೆ ಪ್ರತ್ಯಕ್ಷ; ಸಾರ್ವಜನಿಕರ, ಪ್ರಯಾಣಿಕರ ಆತಂಕ, ಅರಣ್ಯ ಇಲಾಖೆ ಅಧಿಕಾರಿಗಳ ಶೋಧ ಕಾರ್ಯಾಚರಣೆ

ಮತ್ತೆ ಬೆಳ್ಳಂಬೆಳಿಗ್ಗೆ ಡ್ರೋಣ ಕ್ಯಾಮೆರಾ ಮೂಲಕ ಬಿಂಕದಕಟ್ಟಿ, ಅಸುಂಡಿ ಹಾಗೂ ಗದಗ ರಸ್ತೆಯಲ್ಲಿ, ಪ್ರಾಣಿ ಸಂಗ್ರಹಾಲಯದ ಸುತ್ತಮುತ್ತ ಕಣ್ಣಾಡಿಸಿದರೂ ಚಿರತೆ ಪತ್ತೆಯಾಗಿಲ್ಲ. ನಿನ್ನೆ ರಾತ್ರಿ ಬಿಂಕದಕಟ್ಟಿ ಹಾಗೂ ಅಸುಂಡಿ, ಟೀಚರ್ಸ್ ಕಾಲೋನಿಯಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ.

ಡ್ರೋಣ ಕ್ಯಾಮೆರಾ ಕಣ್ಣಿಗೂ ಕಾಣದ ಚಿರತೆ ಟೀಚರ್ಸ್ ಕಾಲೋನಿ ಮೂಲಕ ಕಳಸಾಪೂರ, ನಾಗಾವಿ ಕಡೆ ಹೋಗಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ, ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತದೆ.