15 ಲಕ್ಷ ರೂ. ಮೌಲ್ಯದ 3 ವಾಹನಗಳು ವಶಕ್ಕೆ…ಎಸ್ಪಿ ಬಿ.ಎಸ್. ನೇಮಗೌಡ ಪ್ರಶಂಸೆ…
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಅಂತರ್‌ರಾಜ್ಯಗಳಲ್ಲಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಉಂಬಳಬೈಲ್‌ದ ಸೈಯದ್ ಇರ್ಫಾನ್ ಅಲಿಯಾಸ್ ನಿಹಾಲ್‌ನನ್ನು ಲಕ್ಷ್ಮೇಶ್ವರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ಬಂಧಿತನಿಂದ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಹಿನ್ನಲೆಯಲ್ಲಿ ಆತ ಕದ್ದ ಕಾರುಗಳನ್ನು ಮಾರಾಟ ಮಾಡಲು ಲಕ್ಷ್ಮೇಶ್ವರದ ರಂಭಾಪುರಿ ನಗರದಲ್ಲಿದ್ದಾನೆಂಬ ಸುಳಿವು ಪಡೆದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.
ಪೊಲೀಸರನ್ನು ಕಂಡು ತಪ್ಪಿಸಿಕೊಂಡು ಹೋಗುತ್ತಿರುವಾಗ ಪೊಲೀಸರು ತಮ್ಮ ವಾಹನದಲ್ಲಿ ಬೆನ್ನಟ್ಟಿ ಹಿಡಿದು, ವಿಚಾರಣೆಗೊಳಪಡಿಸಿ ಆತನಿಂದ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂದಾಜು 5 ಲಕ್ಷ ರೂ. ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ, ಅಂದಾಜು 7 ಲಕ್ಷ ರೂ.ಗಳ ಮಾರುತಿ ಬ್ರಿಝಾ, 3 ಲಕ್ಷ ರೂ.ಗಳ ಕಿಮ್ಮತ್ತಿನ ಮಾರುತಿ ಇಕೋ ವ್ಯಾನ್ ಸೇರಿ ಒಟ್ಟು 15 ಲಕ್ಷ ರೂ. ಮೌಲ್ಯದ ಮೂರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರು ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಂ ಶಿರಗುಪ್ಪಿ, ಪಿಎಸ್‌ಐ ಯೂಸುಫ್ ಜಮೂಲಾ, ಕ್ರೈಮ್ ಪಿಎಸ್‌ಐ ವಿ.ಜಿ ಪವಾರ, ಎಎಸ್‌ಐ ಎಮ್.ಎ ಮೌಲ್ವಿ, ಟಿ.ಕೆ ರಾಠೋಡ, ವೈ.ಎಸ್ ಕುಬಿಹಾಳ, ಎಸ್.ಎಸ್ ಮಕಾನದಾರ, ಜಿ.ಎಂ ಬೂದಿಹಾಳ,
ಸಿಬ್ಬಂದಿಗಳಾದ ಎಮ್.ಎ ಶೇಖ್, ಎಮ್.ಡಿ ಲಮಾಣಿ, ಆರ್.ಎಸ್ ಯರಗಟ್ಟಿ, ಪಾಂಡುರಂಗರಾವ್, ಎಮ್.ಎಸ್ ಬಳ್ಳಾರಿ, ಪ್ರಕಾಶ ಮ್ಯಾಗೇರಿ, ಆನಂದಸಿಂಗ್ ದೊಡಮನಿ, ಸಿ.ಎಸ್ ಮಠಪತಿ, ಡಿ.ಎಸ್ ನದಾಫ್, ಬಿ.ಆರ್ ಗ್ರಾಮಪುರೋಹಿತ್, ಆನಂದ ಕಮ್ಮಾರ, ಎಚ್.ಐ ಕಲ್ಲಣ್ಣವರ, ಎನ್.ಹೆಚ್ ಮಠಪತಿ, ಸೋಮು ವಾಲ್ಮೀಕಿ, ಸಂಜು ಕೊರಡೂರ, ಮದ್ದು ಧಾರವಾಡ, ಮಹಾಂತೇಶ ಐಗಾರ, ಮಲ್ಲಿಕಾರ್ಜುನ ಅಂಗಡಿ, ಕೆ. ಮುಕಾಶಿ, ಅಪ್ಪಣ್ಣ ರಾಠೋಡ ಇವರ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮತ್ತು ಡಿಎಸ್‌ಪಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.