ನಿಸರ್ಗ ಡಾಬಾ ಬಳಿ ಕಾರ್ಯಾಚರಣೆ…..
ಕೊಪ್ಪಳ: ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಯ ಎಸ್ಡಿಎ ವೆಂಕಟೇಶ ಸೋಮಪ್ಪ ಪೂಜಾರ ಅವರು ಲಂಚದ ಹಣ 5000 ಪಡೆದುಕೊಂಡು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ರೂ. 5ಲಕ್ಷ ಪ್ರೋತ್ಸಾಹಧನ ಮಂಜೂರಾತಿ ಕುರಿತಂತೆ ಅರ್ಜಿದಾರರಿಗೆ ವೆಂಕಟೇಶ ಸೋಮಪ್ಪ ಪೂಜಾರ ಅವರು 5 ಸಾವಿರ ರೂ.ಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಏ 5ರ ಮಧ್ಯಾಹ್ನ 1.55 ಗಂಟೆಯ ಸುಮಾರಿಗೆ ಹೊಸಪೇಟೆ ರಸ್ತೆಯ ನಿಸರ್ಗ ಡಾಬಾ ಮುಂದೆ ಇರುವ ಪಾನ್ ಶಾಪ್ ಹತ್ತಿರ ಫಿರ‍್ಯಾದಿದಾರರಿಂದ ಲಂಚದ ಹಣ ಪಡೆದುಕೊಂಡು ಟ್ರಾಪ್‌ಗೆ ಒಳಗಾಗಿದ್ದಾರೆ.
ಆರೋಪಿತನನ್ನು ಲೋಕಾಯುಕ್ತ ಪೊಲೀಸರು ತನ್ನ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದೆ.
ಲೋಕಾಯುಕ್ತ ಕೊಪ್ಪಳ ಪೊಲೀಸ್ ಉಪಾಧೀಕ್ಷಕರಾದ ಸಲೀಂಪಾಷಾ ಅವರ ಮಾರ್ಗದರ್ಶನದಲ್ಲಿ ಪಿ.ಐ (ತನಿಖಾಧಿಕಾರಿ) ಸಂತೋಷ ರಾಠೋಡ, ಪಿ.ಐ ಗಿರೀಶ ರೋಡ್ಕರ್, ಪಿಐ ರಾಜೇಶ ಬಟಗುರ್ಕಿ, ಪಿ.ಐ ಚಂದ್ರಪ್ಪ ಈಟಿ., ಸಿಹೆಚ್‌ಸಿ ಸಿದ್ದಯ್ಯ, ಸಿಹೆಚ್‌ಸಿ ರಾಮಣ್ಣ, ಸಿಹೆಚ್‌ಸಿ ಬಸವರಾಜ ಬೀಡನಾಳ, ಸಿಪಿಸಿ ರಂಗನಾಥ, ಸಿಪಿಸಿ ನಾಗಪ್ಪ, ಮಪಿಸಿ ತಾರಾಮತಿ, ಮಪಿಸಿ ಶೈಲಜಾ, ಎಪಿಸಿ ಆನಂದಕುಮಾರ, ಎಪಿಸಿ ಗುರು ದೇಶಪಾಂಡೆ, ಎಹೆಚ್‌ಸಿ ರಾಜು ಅವರು ಈ ಟ್ರಾಪ್ ಪ್ರಕರಣದಲ್ಲಿ ಭಾಗವಹಿಸಿರುತ್ತಾರೆ ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.