ಮತ್ತೊಬ್ಬ ಮಟಕಾ ಬುಕ್ಕಿಯ ಮೇಲೆ ಕೇಸ್….
ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ಸಾರ್ವಜನಿಕರಿಂದ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಅವರಿಂದ ಹಣ ಪಡೆದು ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ.ಸಿ ಜೂಜಾಟ ಆಡಿಸುತ್ತಿದ್ದ ಪೇಂಟ್ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಸಿಂಹಾಸನ ಪ್ಲಾಟ್ ನಿವಾಸಿ ಪೇಂಟ್ ಅಂಗಡಿ ವ್ಯಾಪಾರಿಯಾಗಿರುವ ಕಿಶೋರ್ ತಂದೆ ಗಜಾನನಸಾ ಬದಿ ಬಂಧಿತ ಆರೋಪಿಯಾಗಿದ್ದು, ಈಶ್ವರ ದೇವಸ್ಥಾನದ ಬಳಿ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಸೋಮನಗೌಡ ಗೌಡ್ರ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಕಿಶೋರ್ ನಿಂದ ಓ.ಸಿ ಪಟ್ಟಿ ಪಡೆದುಕೊಳ್ಳುವ ಬುಕ್ಕಿ ಅನಿಲ ಧರ್ಮೇಂದ್ರಸಾ ಜರತಾರಿ ಎಂಬುವರು ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ಸಂದರ್ಭದಲ್ಲಿ ನಗದು 850 ರೂಪಾಯಿ ಹಾಗೂ ಓ.ಸಿ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 0132/2023-karnataka police act,1963(U/s-78(3)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.