HomeCrime Newsಡಾ. ಗೀತಾ ಸೂಸೈಡ್; ಮನೆಯಲ್ಲಿ ನೇಣಿಗೆ ಶರಣಾದ ವೈದ್ಯಾಧಿಕಾರಿ...?

ಡಾ. ಗೀತಾ ಸೂಸೈಡ್; ಮನೆಯಲ್ಲಿ ನೇಣಿಗೆ ಶರಣಾದ ವೈದ್ಯಾಧಿಕಾರಿ…?

For Dai;y Updates Join Our whatsapp Group

Spread the love

ಗದಗನ RBSK ಡಾ….ಗೀತಾ

ವಿಜಯಸಾಕ್ಷಿ ಸುದ್ದಿ, ಗದಗ

ಯುವ ವೈದ್ಯೆ ಒಬ್ಬರು ನೇಣಿಗೆ ಶರಣಾದ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದರೆ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಈ ಘಟನೆ ಜರುಗಿದೆ.

ಡಾ. ಗೀತಾ (ಧನಗರ್) ಕುಶಾಲ್ ಕೋರಿ (40) ನೇಣಿಗೆ ಶರಣಾದ ವೈದ್ಯಾಧಿಕಾರಿ.

(ಆರ್‌ಬಿ‌ಎಸ್‌ಕೆ ) ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯಾಗಿ ಗದಗನ ಟಿಎಚ್ಒದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೂಲತಃ ಕಲಬುರಗಿ ಜಿಲ್ಲೆಯ ಡಾ. ಗೀತಾ ಧನಗರ್ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಡಾ. ಕುಶಾಲ್ ಕೋರಿ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.


ಸುದ್ದಿ ತಿಳಿದು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೋಡೆಯ ಮೇಲೆ ಸಾವಿನ ಬಗ್ಗೆ ಬರಹವಿದ್ದು, ಅದನ್ನು ಬರೆದವರು ಯಾರು ಎಂಬುದು ಮಾಹಿತಿ ಲಭ್ಯವಾಗಿಲ್ಲ. ಈ ಘಟನೆ ಕುರಿತು ಮಾಹಿತಿ ಪಡೆಯಲು ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಮ್.ಎಮ್. ನದಾಫ್ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಡಾ. ಗೀತಾ ಆತ್ಮಹತ್ಯೆ ಮಾಡಿಕೊಂಡ್ರಾ ಅಥವಾ ಕೊಲೆ ಮಾಡಿ ನೇಣು ಹಾಕಲಾಗಿದೆಯೋ ಎಂಬ ಮಾಹಿತಿ ಲಭ್ಯವಾಗಿಲ್ಲ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!