ಗದಗನ ಅಮರೇಶ್ವರ ನಗರ ನಿವಾಸಿ ಮೊಹಮ್ಮದ್ ರಫೀಕ ಮಾಳೆಕೊಪ್ಪ ಆರೋಪಿ…….
ಲಕ್ಷ್ಮೇಶ್ವರ/ಗದಗ : ಯಾವುದೇ ದಾಖಲೆಗಳಿಲ್ಲದೇ ರಾಣೇಬೆನ್‌ನೂರಿನಿಂದ ಲಕ್ಷ್ಮೇಶ್ವರಕ್ಕೆ ಸಾಗಿಸುತ್ತಿದ್ದ ಅಕ್ಕಿಯನ್ನು ಗೋನಾಳ ಚೆಕ್‌ಪೋಸ್ಟ್‌ನಲ್ಲಿ ಲಕ್ಷ್ಮೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏಪ್ರಿಲ್ 1ರ ಮುಂಜಾನೆ 9.30ರ ಸಮಯದಲ್ಲಿ ಗಂಗಿಮಡಿ ರಸ್ತೆಯ ಅಮರೇಶ್ವರ ನಗರದ ಚಾಲಕ ಮೊಹಮ್ಮದರಫೀಕ್ ಬಾಬುಸಾಬ ಮಾಳೆಕೊಪ್ಪ ಈತನು ತನ್ನ ಕ್ಯಾಂಟರ್ ವಾಹನದಲ್ಲಿ ಯಾವುದೇ ಬಿಲ್ ಅಥವಾ ಕಾಗದ ಪತ್ರಗಳಿಲ್ಲದೇ ರಾಣೇಬೆನ್ನೂರಿನಲ್ಲಿ ಅಕ್ಕಿಯನ್ನು ತುಂಬಿಸಿಕೊಂಡು ಲಕ್ಷ್ಮೇಶ್ವರಕ್ಕೆ ಸಾಗಾಟ ಮಾಡುತ್ತಿದ್ದ.
ಗೋನಾಳ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ನಡೆಸುವಾಗ ಸಿಕ್ಕಿದ್ದು, ತಾನು ಸಾಗಾಟ ಮಾಡುತ್ತಿದ್ದ ಅಕ್ಕಿಯ ಬಗ್ಗೆ ಯಾವುದೇ ದಾಖಲಾತಿಗಳನ್ನು ಹೊಂದಿರಲಿಲ್ಲ ಮತ್ತು ಸಮರ್ಪಕ ಉತ್ತರವನ್ನೂ ನೀಡದಿರುವುದರಿಂದ ಅಕ್ಕಿಯನ್ನು ಯಾವುದೋ ದುರುದ್ದೇಶಕ್ಕಾಗಿ ಅಥವಾ ಹಂಚಿಕೆ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಸಂಶಯದ ಆಧಾರದ ಮೇಲೆ ಕಲಂ: 98, kp act/0040/2023 ಅಡಿಯಲ್ಲಿ ಚೆಕ್‌ಪೋಸ್ಟ್ ಅಧಿಕಾರಿಗಳು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.