ವಾಟ್ಸಾಪ್‌ನಲ್ಲಿ ಶಾಸಕ ರಾಮಣ್ಣ ಲಮಾಣಿ ಶುಭಾಶಯ: ತರಾಟೆ ತೆಗೆದುಕೊಂಡ ಬಿಜೆಪಿ ಕಾರ್ಯಕರ್ತರು!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ರಾಷ್ಟ್ರೀಯ ಮತದಾರರ ದಿನದಂದೇ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರನ್ನು, ಸ್ವಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಇರುವ ಕಾರಣಕ್ಕೆ ಶಾಸಕ ರಾಮಣ್ಣ ಲಮಾಣಿ ಅವರು ವಾಟ್ಸಾಪ್ ಗ್ರುಪ್‌ವೊಂದರಲ್ಲಿ ‘ಸಂವಿಧಾನದ ಆಶಯದಂತೆ, ಪ್ರಜಾಪ್ರಭುತ್ವ ಅನ್ವಯ ತಮ್ಮ ಸೇವಕನನ್ನು ಆಯ್ಕೆಗೊಳಿಸುವ ಪ್ರಕ್ರಿಯೆಯೇ ಮತದಾನ. ಇದು ಜಗತ್ತಿನ ಸರ್ವಶಕ್ತ ಸಾಂವಿಧಾನಿಕ ಜವಾಬ್ದಾರಿ. ನನ್ನನ್ನು ವಿಧಾನಸಭೆಗೆ ಆಯ್ಕೆಗೊಳಿಸಿ ಸೇವೆಗೆ ಅನುವು ಮಾಡಿಕೊಟ್ಟ ನಮ್ಮ ಕ್ಷೇತ್ರದ ಮತದಾರರ ಬಂಧುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂಬ ಶುಭಾಶಯವುಳ್ಳ ಪೋಸ್ಟರ್ ಹಾಕಿದ್ದಾರೆ. ಇದಕ್ಕೆ ಬಿಜೆಪಿಯ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆರಿಸಿ ಕಳಿಸಿದ್ದಕ್ಕೆ ನಿಮ್ಮ ಮನೆಯವರು ಎಲ್ಲರೂ ಸೇರಿ ಕಾಂಗ್ರೆಸ್‌ನವರಿಗೆ ಕೆಲಸ ಕೊಟ್ಟು ಬಿಜೆಪಿ ಕಾರ್ಯಕರ್ತರಿಗೆ ಸರಿಯಾಗಿ ಪಾಠ ಕಲಿಸ್ತಿದ್ದೀರಿ

‘ನಿಮ್ಮ ಎಲೆಕ್ಷನ್ ಸಲುವಾಗಿ ನಮ್ಮ ಊರಾಗ ಕೆರಾ, ಮಚ್ಚಿ ಹಿಡಕೊಂಡು ವೋಟ್ ಹಾಕಿಸೇವಿ. ನೀವು ಸೋತಾಗ 44 ವೋಟ್ ಇದ್ದ ಬಿಜೆಪಿ 450 ವೋಟ್ ಮಾಡಿದ್ದು ನಾವು. ನಿಮ್ಮ ಕೊಡುಗೆ ಏನು ಇಲ್ಲ. ಇವಾಗ ಕಾಂಗ್ರೆಸ್‌ನ ಜೊತೆ ಸೇರಿ ನಮಗೆ ಎಚ್ಚರ ಮಾಡ್ತಿದ್ದೀರಾ. ತಾಲೂಕಿನ ತುಂಬಾ ನಿಮ್ಮ ಹಿಂದೆ ತಿರುಗುವವರು ಸಮಯಕ್ಕಾಗಿ ಕಾಯ್ತಿದ್ದಾರೆ. ಇನ್ನೇನು ಬಹಳ ದಿನವಿಲ್ಲ. ನಿಮ್ಮ ಅವನತಿ ಶುರುವಾಗುತ್ತೆ…ನೆನಪಿರಲಿ
ಇದಕ್ಕೆ ಮಂಜುನಾಥ ಎಂಬವವರು ‘ಶಂಕರ ಏನಿದು? ಬಹಿರಂಗವಾಗಿ ಮಾತನಾಡುವೆ ಮನೆಗೆ ಹೋಗಿ ಎಂದಿದ್ದಾರೆ.

‘ಯಾವೊಬ್ಬ ಬಿಜೆಪಿ ಕಾರ್ಯಕರ್ತರು ಸಮಾಧಾನವಿದ್ದಾರೆ. ಎಲ್ಲರೂ ಸಮಯಕ್ಕಾಗಿ ಕಾಯ್ತಿದ್ದಾರೆ. ಒಂದೇ ಸಾರಿ ಗುಮ್ಮೋಕೆ… ನಿದ್ದೆಯಲ್ಲಿದ್ದೀರಿ 30,000 ಲೀಡ್‌ನಲ್ಲಿ 315 ವೋಟ್‌ನಿಂದ ಸೋತಿದ್ದು ನೆನಪಿರಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.

‘ನಿಮಗೆ ಬುದ್ಧಿ ಹೇಳೋ ಯಾವ ನಾಯಕರನ್ನು ನಿಮ್ಮ ಜೊತೆ ಇಟ್ಟುಕೊಳ್ಳಲಿಲ್ಲ. ನಿಮಗೆ ಹೊಗಳಿಕೆ ಭಟ್ಟರು ಅಷ್ಟೇ ಬೇಕು. ಒಂದು ಶಾಸ್ತ್ರ ಇದೆ ಬೈದು ಹೇಳೋರು ಒಳ್ಳೆಯದಕ್ಕೆ, ನಕ್ಕು ಹೇಳೋರು ತಮ್ಮ ಲಾಭಕ್ಕೆ.. ನೆನಪಿರಲಿ ಎಂದು ಬುದ್ಧಿ ಹೇಳಿದ್ದಾರೆ.

‘ಹೋದ ಸಲ ಎಲೆಕ್ಷನ್ ಅನ್ನೋ ಹುಚ್ಚು ನೆತ್ತಿಗೆ ಏರಿತ್ತು. ನಿಮ್ಮ ಬಗ್ಗೆ ಯಾವುದನ್ನು ವಿಚಾರ ಮಾಡದೇ ಹೊತ್ತು ಕುಣಿದಿದ್ದಾರೆ. ಅದಕ್ಕೆ ನೀವು ಎಲ್ಲರಿಗೂ 5 ವರ್ಷದಲ್ಲಿ ನೀವು ನಿಮ್ಮ ಮನೆಯವರು ಸೇರಿ ಎಲ್ಲರಿಗೂ ಹುಚ್ಚು ಹಿಡಿಸಿದ್ದೀರಿ

‘ಎಲ್ಲರೂ ನಿಮ್ಮ ಆಟ ನೋಡಿ ಸುಮ್ಮನಿದ್ದಾರೆ ಅಂದ್ರೆ ಕೈಯಲ್ಲಿ ಏನು ಆಗಲ್ಲ ಅಂತಾ ಅಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು ಅಂತಾ. ಎಲ್ಲರೂ ಟೈಮ್‌ಗಾಗಿ ಕಾಯ್ತಿದ್ದಾರೆ. ನೆಕ್ಸ್ಟ್ ನವೆಂಬರ್‌ನಿಂದ ಸ್ಟಾರ್ಟ್ ಆಗುತ್ತೆ ಎಂದು ಶಾಸಕ ರಾಮಣ್ಣ ಲಮಾಣಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಮಹತ್ವದ ದಿಶಾ ಸಭೆಯಲ್ಲಿ ಶಾಸಕ ರಾಮಪ್ಪ ಲಮಾಣಿ, ಅಭಿವೃದ್ಧಿ ಚರ್ಚೆ: ಮಂಗಳವಾರ ಗದಗ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಗದಗ ಜಿಲ್ಲೆಯ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನಮ್ಮೆಲ್ಲರ ನೆಚ್ಚಿನ ಕ್ರಿಯಾಶೀಲ ಶಾಸಕರಾದ ರಾಮಪ್ಪ ಲಮಾಣಿ ಭಾಗಿಯಾಗಿದ್ದರು. ಸಂಸದ ಶಿವಕುಮಾರ ಉದಾಸಿಯವರ ನೇತೃತ್ವದಲ್ಲಿ ನಡೆದ ಮಹತ್ವದ ದಿಶಾ ಸಭೆಯಲ್ಲಿ ಗದಗ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ಅವಲೋಕನ ಮತ್ತು ಭವಿಷ್ಯದ ಯೋಜನೆಗಳ ಸಾಕಾರಕ್ಕಾಗಿ ರಾಮಪ್ಪ ಲಮಾಣಿ, ಮಹತ್ವದ ದಾಖಲೆಗಳೊಂದಿಗೆ ಚರ್ಚಿಸಿದರು ಎಂದು ಪುನಃ ಅದೇ ಗ್ರುಪ್‌ನಲ್ಲಿ ಫೊಸ್ಟ್ ಬಂದಿದೆ.

ಇದಕ್ಕೆ ಒಬ್ಬರು ‘ಲಕ್ಷ್ಮೇಶ್ವರದಿಂದ ಮಾಗಡಿವರೆಗೆ ರಸ್ತೆ ಸರಿ ಮಾಡಿಸಿ ದಯವಿಟ್ಟು ಎಂದು ಕಮೆಂಟ್ ಮಾಡಿದ್ದಾರೆ.

‘ಮುಗಿದೆ ಹೋಗಿದೆ ಕ್ಷೇತ್ರದ ಅಭಿವೃದ್ಧಿ, ಇವಾಗ ನಿಮ್ಮ ಅಭಿವೃದ್ಧಿ ಅಷ್ಟೇ

ಇದಕ್ಕೆ ಮಂಜುನಾಥ ಎಂಬುವವರು ‘ಇನ್ನೂ ಸಮಯವಿದೆ ಶಂಕರ ದುಡುಕ ಬೇಡ ಎಂದಿದ್ದಾರೆ. ಮರು ಪ್ರತಿಕ್ರಿಯಿಸಿರುವ ಶಂಕರ ಎಂಬ ವ್ಯಕ್ತಿ ‘ನಾಲ್ಕು ವರ್ಷದಿಂದ ಅದೇ ಆಗಿದೆ ಎಲ್ಲರದೂ ಎಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇರುವಾಗಲೇ ಹಾಲಿ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರ ಹಾಕುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


Spread the love

LEAVE A REPLY

Please enter your comment!
Please enter your name here