ವಿಜಯಸಾಕ್ಷಿ ಸುದ್ದಿ, ಮುಂಡರಗಿ
Advertisement
ಕಿರಾಣಿ/ಕೋಲ್ಡಿಂಕ್ಸ್ ಅಂಗಡಿಯೊಂದರ ಬೀಗವನ್ನು ಮೀಟಿ ತೆಗೆದು, ಅಂಗಡಿಯ ಡ್ರಾದಲ್ಲಿಟ್ಟಿದ್ದ 1,05,000 ರೂ. ನಗದು ಹಣವನ್ನು ದೋಚಿರುವ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರೇವಡ್ಡಟ್ಟಿ ಗ್ರಾಮದ ಬಸ್ ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಹಿರೇವಡ್ಡಟ್ಟಿಯ ಚಂದ್ರಶೇಖರ ಹನುಮಪ್ಪ ಮೇಸ್ತಿ ಎಂಬುವರಿಗೆ ಸೇರಿದ ಕಿರಾಣಿ/ ಕೋಲ್ಡ್ರಿಂಕ್ಸ್ ಅಂಗಡಿಯಲ್ಲಿ ಯಾರೋ ಕಳ್ಳರು ಅಂಗಡಿಯ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಮೀಟಿ ಮುರಿದು, ಅಂಗಡಿಯ ಒಳಹೊಕ್ಕು, ಟೇಬಲ್ ಡ್ರಾದಲ್ಲಿರಿಸಿದ್ದ 1,05,000 ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.