ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದ್ದ ಅತಿಥಿ ಶಿಕ್ಷಕನ ರಾಕ್ಷಸಿ ಕೃತ್ಯ
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಸೋಮವಾರ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯಿಂದ ಹಲ್ಲೆಗೊಳಗಾಗಿದ್ದ ಅತಿಥಿ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಸೋಮವಾರ ಭರತ ಎಂಬ ಹತ್ತು ವರ್ಷದ ಬಾಲಕ ಶಿಕ್ಷಕನ ಅಟ್ಟಹಾಸಕ್ಕೆ ಅಂದೇ ಮೃತಪಟ್ಟಿದ್ದ.
ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಹಾಗೂ ಶಿಕ್ಷಕಿ ಗೀತಾ ಬಾರಕೇರ ನಡುವೆ ಇದ್ದ ಸಂಬಂಧ ಇತ್ತೀಚೆಗೆ ಹಳಸಿತ್ತು ಎನ್ನಲಾಗಿದೆ.
ಇದನ್ನೂ ಓದಿ ಶಿಕ್ಷಕನ ಅಟ್ಟಹಾಸಕ್ಕೆ ವಿದ್ಯಾರ್ಥಿ ಬಲಿ; ಶಿಕ್ಷಕಿ ಸ್ಥಿತಿ ಚಿಂತಾಜನಕ, ಸ್ಥಳದಲ್ಲಿ ಪೊಲೀಸರ ಮೊಕ್ಕಾಂ
ಹದ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಇನ್ನೊಬ್ಬ ಅದೇ ಶಾಲೆಯ ಸಂಗನಗೌಡನ ಜೊತೆಗೆ ಅತಿಥಿ ಶಿಕ್ಷಕಿ ಗೀತಾ ಸಲುಗೆಯಿಂದ ನಡೆದುಕೊಂಡಿದ್ದಳು ಎಂದು ಆರೋಪಿ ಮುತ್ತಪ್ಪ ಹಡಗಲಿ ಕೋಪಗೊಂಡಿದ್ದ.
ಹೀಗಾಗಿ ಸೋಮವಾರದಂದು ಶಿಕ್ಷಕಿ ಗೀತಾ ಬಾರಕೇರ ಅವರ ಪುತ್ರ ನಾಲ್ಕನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಭರತ ಎಂಬಾತನನ್ನು ಸಲಿಕೆಯಿಂದ ಥಳಿಸಿ ಮೊದಲ ಮಹಡಿಯಿಂದ ಕೆಳಗೆ ಎತ್ತಿ ಹಾಕಿದ್ದ. ಬಿಡಿಸಲು ಬಂದಿದ್ದ ಗೀತಾಳ ಮೇಲೂ ತೀವ್ರ ಹಲ್ಲೆ ಮಾಡಿದ್ದ. ಇದರಿಂದಾಗಿ ಭರತ ತೀವ್ರ ಗಾಯಗೊಂಡು ಸೋಮವಾರವೇ ಮೃತಪಟ್ಟಿದ್ದ.
ಇದನ್ನೂ ಓದಿ ಒಂದೇ ಮನೆಯ ಮೂವರ ಆತ್ಮಹತ್ಯೆ; ಮನಕಲಕುವ ಘಟನೆ
ಅತಿಥಿ ಶಿಕ್ಷಕಿ ಗೀತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಳು. ಗುರುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.