ಗಣೇಶ ಹಾಗೂ ದುರಗಪ್ಪ ಸಿಕ್ಕಿ ಬಿದ್ದವರು, ಇನ್ನೊಬ್ಬ ಪರಾರಿ?
ವಿಜಯಸಾಕ್ಷಿ ಸುದ್ದಿ, ನರೇಗಲ್ಲ
ರೈತರ ಹೊಲದಲ್ಲಿ ಬೆಳೆದಿದ್ದ ಮೆಣಸಿನಕಾಯಿಯನ್ನು ಕಳವು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಪ್ರಕರಣ ರೋಣ ತಾಲೂಕಿನಲ್ಲಿ ನಡೆದಿದೆ.
ನ.29ರಂದು ರಾತ್ರಿ 10.30ರಿಂದ 11.30ರ ಸಮಯದಲ್ಲಿ ಪ್ರಕರಣದ ಆರೋಪಿತರಾದ ಮಾರನಬಸರಿಯ ಗಣೇಶ ಶಂಕ್ರಪ್ಪ ಮಾಳೋತ್ತರ, ಮುಶಿಗೇರಿಯ ದುರಗಪ್ಪ ಮರಿಯಪ್ಪ ಮಾದರ ಹಾಗೂ ಮಾರನಬಸರಿಯ ಕಲ್ಲಪ್ಪ ಎಂಬುವರು ತಮ್ಮ ಬೈಕ್‌ನಲ್ಲಿ ರೋಣದ ಜಿಗಳೂರ ಗ್ರಾಮದ ಸರಹದ್ದಿನ ಸಣ್ಣದ್ಯಾಮಪ್ಪ ಬಸಪ್ಪ ಮಡಿವಾಳರ ಎಂಬುವರ 7.35 ಎಕರೆ ವಿಸ್ತೀರ್ಣದ ಹೊಲಕ್ಕೆ ತೆರಳಿ, ಅಂದಾಜು 400 ರೂ. ಮೌಲ್ಯದ 8 ಕೆಜಿ ಮೆಣಸಿನ ಕಾಯಿಯನ್ನು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದರು.
ಈ ಸಮಯದಲ್ಲಿ ದೂರುದಾರ ಸಣ್ಣದ್ಯಾಮಪ್ಪ ಹಾಗೂ ಅವರ ಮಗ ಆರೋಪಿ ಗಣೇಶ ಹಾಗೂ ದುರುಗಪ್ಪ ಇಬ್ಬರನ್ನೂ ಹಿಡಿದುಕೊಂಡಿದ್ದು, 3ನೇ ಆರೋಪಿ ಕಲ್ಲಪ್ಪ ಪರಾರಿಯಾಗಿದ್ದ ಬಗ್ಗೆ ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.