ಪೊಲೀಸರ ಕಾರ್ಯಾಚರಣೆ; ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಜನರ ಬಂಧನ

0
Spread the love

65ಸಾವಿರ ಹಣ ಜಪ್ತಿ…..

Advertisement

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಜನರ ತಂಡದ ಮೇಲೆ ಬಡಾವಣೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಇಲ್ಲಿನ ಪಂಚಾಕ್ಷರಿ ನಗರದ 3ನೇ ಕ್ರಾಸ್ ಹತ್ತಿರ ಬನ್ನಿಕಟ್ಟಿ ಸಮೀಪ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗದಗ ತಾಲೂಕಿನ ಮದಗಾನೂರು ಗ್ರಾಮದ ಬಸವರಾಜ್ ನೀಲಕಂಠಪ್ಪ ಓಲೇಕಾರ, ಬೆಳಹೋಡ ಗ್ರಾಮದ ಪಡಿಯಪ್ಪಗೌಡ ನಿಂಗನಗೌಡ ಫಕೀರಗೌಡ್ರ, ಹಿರೇಹಂದಿಗೋಳದ ಚನ್ನಪ್ಪ ದೇವಪ್ಪ ಆರಟ್ಟಿ, ರುದ್ರಪ್ಪ ಹನಮಪ್ಪ ತಳವಾರ, ಬಿಂಕದಕಟ್ಟಿಯ ರಮೇಶ್ ವೆಂಕಪ್ಪ ಮೂಲಿಮನಿ, ಚಂದ್ರಪ್ಪ ದುರಗಪ್ಪ ದೊಡಮನಿ, ಹುಲಕೋಟಿಯ ಶಂಕ್ರಪ್ಪ ಹನಮಂತಪ್ಪ ಮುಳಗುಂದ, ಶಿವಾನಂದ ರಾಮಪ್ಪ ಕವಡಿಕಾಯಿ, ರಾಜು ಗೋವಿಂದಗೌಡ ಜಲರಡ್ಡಿ, ಹುಬ್ಬಳ್ಳಿಯ ನವನಗರದ ಸಿಟಿ ಪಾರ್ಕ್‌ನ ಅನಿಲಸಿಂಗ್ ಅಶೋಕಸಿಂಗ್ ಸಮೋರೆ, ಕೊಂಡಿಕೊಪ್ಪದ ತಿಪ್ಪನಗೌಡ ಭೀಮನಗೌಡ ಶೇಷನಗೌಡ ಬಂಧಿತರು.

ಬಂಧಿತರಿಂದ 62ಸಾವಿರದ 260 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಟಗೇರಿ ಸಿಪಿಐ ಬಿ.ಜಿ ಸುಬ್ಬಾಪೂರಮಠ ಹಾಗೂ ಸಿಬ್ಬಂದಿ ಈ ದಾಳಿ ಮಾಡಿದ್ದರು.
ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ 0060/2023, Karnataka police act, 1963(U/s-87) ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here