ವಿಜಯಸಾಕ್ಷಿ ಸುದ್ದಿ, ಗದಗ
ಇಲ್ಲಿನ ರಹಮತ್ ನಗರದಲ್ಲಿ ನಿನ್ನೆ ಜಾನುವಾರು ಮೇಯಿಸಲು ಹೋಗಿ ನೀರುಪಾಲಾಗಿದ್ದ ಇಬ್ಬರ ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಇಬ್ಬರ ಬಾಲಕರ ಶವ ಹೊರತಗೆದಿದ್ದಾರೆ. ನಿನ್ನೆ ರಾತ್ರಿ ಒಬ್ಬನ ಶವ ಪತ್ತೆಯಾದರೆ, ಇಂದು ಮುಂಜಾನೆ ಮತ್ತೊಬ್ಬ ಬಾಲಕನ ಶವ ಪತ್ತೆಯಾಗಿದೆ.
ಇದನ್ನೂ ಓದಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ
ಸಂತೋಷ ಕುಂಬಾರನ ಶವ ನಿನ್ನೆ ರಾತ್ರಿ ಹೊರತಗೆದಿದ್ದರು. ಇಂದು ಮುಂಜಾನೆ ಮಹಮ್ಮದ್ ಅಮನ್ ನ ಶವ ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನ ಜಾನುವಾರು ಮೇಯಿಸಲು ಹೋಗಿದ್ದಾಗ ಮೂವರು ಬಾಲಕರು, ಓರ್ವ ಮಹಿಳೆ ನೀರುಪಾಲಾಗಿದ್ದರು. ಅದರಲ್ಲಿ ಓರ್ವ ಬಾಲಕನನ್ನು ಹಾಗೂ ಮಹಿಳೆಯನ್ನು ರಾಜ್ ಸಿಂಗ್ ಎಂಬುವರು ರಕ್ಷಣೆ ಮಾಡಿದ್ದರು. ಆದರೆ ಇನ್ನಿಬ್ಬರು ಬಾಲಕರು ಹೊಂಡದಲ್ಲಿ ಮುಳಗಿದ್ದರು.
ಬಾಲಕರ ಶವ ಹೊರತಗೆಯುತ್ತಿದ್ದಂತೆಯೇ ಕುಟುಂಬದವರ ಆಕ್ರಂಧನ ಮುಗಿಲ ಮುಟ್ಟಿತ್ತು. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ, ದಾವಣಗೆರೆ ಜಿಲ್ಲೆಯ ಹರಿಹರದ ಮುಳುಗು ತಜ್ಞ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ್ದಾರೆ.