ಮೂವರಿಂದ ಕರ್ತವ್ಯಕ್ಕೆ ಅಡ್ಡಿ…..
ವಿಜಯಸಾಕ್ಷಿ ಸುದ್ದಿ, ಗದಗ
ಗಣೇಶ ವಿಸರ್ಜನಾ ಮೆರವಣಿಗೆ ಬೇಗ ಮುಗಿಸಿ ಎಂದ ಪೊಲೀಸ್ ಒಬ್ಬರ ಮೇಲೆ ಮೂವರು ಹಲ್ಲೆ ಮಾಡಿದ ಘಟನೆ ಮೊನ್ನೆ ರಾತ್ರಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೊನ್ನೆ ಗದಗ ತಾಲೂಕಿನ ಚಿಂಚಲಿ ಗ್ರಾಮದ ಮಲ್ಲಿಕಾರ್ಜುನ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಬಂದೋಬಸ್ತ್ ಗೆ ತೆರಳಿದ್ದ ಪೇದೆ ಗಿರೀಶ್ ಕುರಹಟ್ಟಿ, ಮೆರವಣಿಗೆ ಬೇಗ ಮುಗಿಸಿ ಅಂದಿದ್ದೆ ತಡ, ಅದೇ ಗ್ರಾಮದ ದುರ್ಗಾನಗರದ ವಿರೇಂದ್ರ ತಂದೆ ಮಂಜಪ್ಪ ಲಕ್ಷ್ಮೀಗುಡಿ, ರಾಕೇಶ್ ತಂದೆ ಹುಚ್ಚಪ್ಪ ವಡ್ಡರ ಹಾಗೂ ಮುದಕಪ್ಪ ತಂದೆ ಹನಮಂತಪ್ಪ ವಡ್ಡರ ಎಂಬ ಮೂವರು ಆರೋಪಿಗಳು, ಪೇದೆ ಜೊತೆಗೆ ವಾಗ್ವಾದಕ್ಕಿಳಿದರು.
ಏಕವಚನದಲ್ಲಿ ಮಾತನಾಡಿದ ಆರೋಪಿಗಳು, ಪೇದೆಯ ಯುನಿಪಾರ್ಮ್ ಕಾಲರ್ ಹಿಡಿದು ಜಗ್ಗಾಡಿ, ಶರ್ಟ್ ಹರಿದು, ಒಬ್ಬ ಅಡ್ಡಗಟ್ಟಿ ಕಪಾಳಕ್ಕೆ ಹೊಡೆದರೆ, ಮತ್ತೊಬ್ಬ ಎದೆಗೆ ಹಾಗೂ ಹೊಟ್ಟೆಯ ಕೆಳಭಾಗಕ್ಕೆ ಹೊಡೆದು ಒಳಪೆಟ್ಟುಪಡಿಸಿದ್ದಾನೆ. ಅಷ್ಟೇ ಅಲ್ಲದೆ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ.
ಪೇದೆ ಗಿರೀಶ್ ಕುರಹಟ್ಟಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮುಳಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರು ಆರೋಪಿಗಳ ವಿರುದ್ಧ 0065/2023, IPC 1860(U/s-341,332,353,504,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.