ಹೊಂಬಳ ಗ್ರಾಮದಲ್ಲಿ ಜೂಜಾಟ……
Advertisement
ವಿಜಯಸಾಕ್ಷಿ ಸುದ್ದಿ, ಗದಗ
ಸಾರ್ವಜನಿಕ ಗಣಪತಿ ಮುಂದೆ ರಸ್ತೆಯ ಮೇಲೆ ಅಂದರ್-ಬಾಹರ್ ಜೂಜಾಡುತ್ತಿದ್ದ ಐವರನ್ನು ಗ್ರಾಮೀಣ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಗದಗ ತಾಲೂಕಿನ ಹೊಂಬಳ ಗ್ರಾಮದ ಪ್ಯಾಟಿ ಅವರ ಓಣಿಯಲ್ಲಿ ಪ್ರತಿಷ್ಟಾಪನೆ ಮಾಡಿದ್ದ ಸಿದ್ಧಲಿಂಗೇಶ್ವರ ಸಾರ್ವಜನಿಕ ಗಣಪತಿ ಮುಂಬಾಗ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ವೀರಣ್ಣ ತಂದೆ ಮಲ್ಲಪ್ಪ ನವಲಗುಂದ, ಶಂಕ್ರಪ್ಪ ತಂದೆ ಚನ್ನಪ್ಪ ಲದ್ದಿ, ಮಾಬುಸಾಬ ತಂದೆ ದೊಡ್ಡ ಹಸನಸಾಬ ಹಾದಿಮನಿ, ಇಮಾಮಸಾಬ್ ದಾವಲಸಾಬ ದಾಯಮ್ಮನವರ ಹಾಗೂ ಹನುಮಂತಪ್ಪ ತಂದೆ ಫಕ್ಕೀರಪ್ಪ ಮಾಗಳದ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 8400 ರೂ.ಗಳನ್ನು ವಶಪಡಿಸಿಕೊಂಡಿದ್ದು, ಕಲಂ 87,ಕೆ.ಪಿ ಆ‌್ಯಕ್ಟ್ ಕ್ರೈಮ್ ನಂ. 0284/2023, ಎನ್.ಸಿ 46/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.