ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವ ನೆಪದಲ್ಲಿ ಗ್ರಾಹಕರಿಗೆ ವಂಚನೆ; ಮಾರಾಟ ಪ್ರತಿನಿಧಿಯಿಂದ ವಂಚನೆ ಆರೋಪ
ವಿಜಯಸಾಕ್ಷಿ ಸುದ್ದಿ, ಮುಳಗುಂದ
ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆ ಸಹಯೋಗದಲ್ಲಿನ ಎಸ್.ಬಿ.ಐ ಬ್ಯಾಂಕ್ ನವರು ವಿತರಣೆ ಮಾಡಲಾಗಿದ್ದ ಕ್ರೆಡಿಟ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ ನೆಪದಲ್ಲಿ ಕ್ರೆಡಿಟ್ ಕಾರ್ಡ್ ಮಾರಾಟ ಪ್ರತಿನಿಧಿಯೊಬ್ಬ 13ಕ್ಕೂ ಹೆಚ್ಚು ಗ್ರಾಹಕರ ಖಾತೆಗಳಿಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದ್ದು. ಹಣ ಕಳೆದುಕೊಂಡ ಕರ್ನಾಟಕ ಬ್ಯಾಂಕ್ ಗ್ರಾಹಕರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಸಂತೋಷಕುಮಾರ ಗೋದಿ ಎಂಬ ವ್ಯಕ್ತಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸೇಲ್ಸಮನ್‌ಆಗಿ ಕಾರ್ಯನಿರ್ವಹಿಸುತ್ತಿದ್ದು. ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವ ನೆಪದಲ್ಲಿ ಗ್ರಾಹಕರ ಖಾತೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಹಿತಿಯನ್ನು ತೆಗೆದುಕೊಂಡು ತನ್ನ ಖಾತೆಗೆ ಸುಮಾರು 5.50 ಲಕ್ಷ ರೂ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯ ಗ್ರಾಹಕರ ಖಾತೆಗಳಲ್ಲಿ ಹಣ ಕಡಿತಗೊಂಡಿದ್ದು ತಡವಾಗಿ ತಿಳಿದುಬಂದಿದ್ದು ಬ್ಯಾಂಕಿನಲ್ಲಿ ವಿಚಾರಣೆ ಮಾಡಿದಾಗ ಕ್ರೆಡಿಟ್ ಕಾರ್ಡ ಬಳಿಕೆ ಮಾಡಿದ್ದರಿಂದ ಹಣ ಕಡಿತಗೊಂಡಿದೆ ಎಂಬ ಉತ್ತರ ದೊರೆತಾಗ ಗ್ರಾಹಕರು ನಾವು ಎಲ್ಲಿಯೂ ಕ್ರೆಡಿಟ್ ಕಾರ್ಡ್ ಬಳಿಕೆ ಮಾಡಿರುವುದಿಲ್ಲ ಹೇಗೆ ಕಡಿತಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಆಗ ಸಂತೋಷ್‌ಕುಮಾರ ಗೋದಿ ಎಂಬ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ವಂಚನೆ ಮಾಡಿದ್ದು ಬೆಳಕಿಗೆ ಬಂದಿದ್ದು ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಸಿಪಿಐ ಅಶೋಕ ಸದಲಗಿ ಅವರು. ಹಣ ದೋಚಿದ ಆರೋಪಿ ಸಂತೋಷಕುಮಾರ ಗೋದಿ ಈತನ ವಿರುದ್ದ ವಂಚನೆ ಹಾಗೂ ಆರ್ಥಿಕ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.