ತ್ರಿಶಾ ಸೇರಿ ಹಲವರಿಂದ ಮೋಸ…….
ವಿಜಯಸಾಕ್ಷಿ ಸುದ್ದಿ, ಗದಗ
ಇತ್ತೀಚೆಗೆ ಉದ್ಯೋಗವರಸಿ ಮೋಸಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆನ್‌ಲೈನ್ ಮೂಲಕ ಲಕ್ಷಾಂತರ ರೂ. ಹಣ ಕಳೆದುಕೊಂಡ ಬಗ್ಗೆ ಪ್ರಕರಣಗಳು ನಡೆಯುತ್ತಲೇ ಇವೆ.
ಇಂಥದ್ದೇ ಪ್ರಕರಣವೊಂದು ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದಿದ್ದು, ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸೋಮೇಶ್ವರ ನಗರದ ದೂರುದಾರ ಅಭಿಷೇಕ್ ಎಂಬುವರಿಗೆ ಏಪ್ರಿಲ್.28ರಂದು 9.30 ಗಂಟೆಗೆ ಅಪರಿಚಿತ ಮೊಬೈಲ್ ಸಂಖ್ಯೆಯೊಂದರಿಂದ ತ್ರಿಶಾ ಎಂಬುವರು ಕರೆ ಮಾಡಿ, ಜಾಬ್ ಆಫರ್ ನೀಡಿದ್ದರು.
ನಂತರ ಎಲಿನಾ, ಆಂಡ್ರಿವ್ ಎಂಬುವರು ವಿವಿಧ ಟಾಸ್ಕ್‌ಗಳನ್ನು ನೀಡಿ, ಹಂತ ಹಂತವಾಗಿ 3,81,704 ರೂ.ಗಳನ್ನು ಹಾಕಿಸಿಕೊಂಡಿದ್ದರು. ನಂತರ, ಜೋತಿ ಎನ್ನುವವರು ಅದಕ್ಕೆ 5,03,304 ರೂಗಳನ್ನು ಕೊಡುತ್ತೇವೆಂದು ಖಾತೆಗೆ ಹಾಕಿ ಆಸೆ ಹುಟ್ಟಿಸಿದ್ದರು.
ನಂತರ ಈ ಹಣವನ್ನು ಖಾತೆಯಿಂದ ವಿಥ್‌ಡ್ರಾ ಮಾಡಲು ಹೋದಾಗ, ಖಾತೆಯನ್ನೇ ಫ್ರೀಜ್ ಮಾಡಿ, ಇನ್ನೂ 3,75,600 ರೂಗಳನ್ನು ಹಾಕಬೇಕೆಂದು ಮೆಸೇಜ್ ಕಳಿಸಿ ಮೋಸ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಅಪರಾಧ: 0033/2023, Information Technology Act-2008ರ ಕಲಂ 66(ಡಿ), 66(ಸಿ) ಅನ್ವಯ ಪ್ರಕರಣ ದಾಖಲಾಗಿದೆ.