ಅಂತರಾಜ್ಯದ ಖದೀಮರಿಂದ ಕೃತ್ಯದ ಶಂಕೆ…?
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ರಸಗೊಬ್ಬರ ಅಂಗಡಿಯಲ್ಲಿ ಕುಳಿತಿದ್ದ ರೈತನೋರ್ವನ ಕಿಸೆಯಿಂದ ಮೂವರು ಕಳ್ಳರು ೨೨೫೦೦ ರೂ ಕಳ್ಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಲೂಕಿನ ರಣತೂರ ಗ್ರಾಮದ ರೈತ ಮುತ್ತಪ್ಪ ಬಸಪ್ಪ ಓಲಿ ಎಂಬುವರು ಪಟ್ಟಣದ ಗೊಬ್ಬರ ಅಂಗಡಿಯಲ್ಲಿ ಕಳೆನಾಶಕ ಔಷಧಿ ಖರೀದಿಗೆ ಬಂದಿದ್ದರು. ಇವರ ಶರ್ಟ್ ಮೇಲ್ಗಿಸೆಯಲ್ಲಿರುವ ದುಡ್ಡನ್ನು ಗಮನಿಸಿದ ಒರ್ವ ಮಹಿಳೆ ಇಬ್ಬರು ಪುರುಷರು ತರಕಾರಿ ಬೀಜ ಮತ್ತು ಕಳೆನಾಶಕ ಔಷಧ ಖರೀದಿ ನೆಪದಲ್ಲಿ ತಂತ್ರಮಾಡಿ ರೈತನ ಕಿಸೆಯಲ್ಲಿದ್ದ ೨೨೫೦೦ ರೂ ಯಾಮರಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ ವಾರ್ಡ್ ನಲ್ಲಿ ಅವ್ಯವಸ್ಥೆ, ಸಿಟ್ಟಿಗೆದ್ದ ಜನ್ರಿಂದ ನಗರಸಭೆಯ ಬಿಜೆಪಿ ಸದಸ್ಯನ ಕೂಡಿ ಹಾಕಿ ಆಕ್ರೋಶ….
ದುಡ್ಡು ಕಳೆದುಕೊಂಡ ರೈತ ತೀವ್ರ ಆತಂಕ್ಕೀಡಾದುದನ್ನು ಮನಗಂಡ ಅಂಗಡಿ ಮಾಲೀಕರು ರೈತನನ್ನು ಸಮಾಧಾನಪಡಿಸಿ ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿ ಕಳ್ಳರು ಆಂಧ್ರದ ಮೂಲದವರಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಶೀಘ್ರವಾಗಿ ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡಕ್ಕೆ ಸದ್ಯಕ್ಕೆ ಯಾರೂ ಹೋಗಬೇಡಿ……..
ಕಳೆದ ಹಲವು ದಿನಗಳಿಂದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ಸಂತೆ ದಿನ, ಅಮವಾಸ್ಯೆ ವೇಳೆ ಕಳ್ಳತನದ ಘಟನೆಗಳು ನಡೆಯುತ್ತಲೇ ಇದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶುಕ್ರವಾರದ ಸಂತೆಗೆ ಲಕ್ಷಾಂತರ ಜನ ಸೇರುವುದನ್ನು ಅರಿತಿರುವ ಕಳ್ಳರ ತಂಡದಿಂದಲೇ ಈ ಕೃತ್ಯ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಶಿವಮೊಗ್ಗ, ಹಾನಗಲ್, ಹುಬ್ಬಳ್ಳಿ, ಗದಗದಿಂದ ಬರುವ ಕಳ್ಳರು ಬಸ್ ನಿಲ್ದಾಣ, ಆಭರಣದ ಅಂಗಡಿ, ಸಂತೆ ಗದ್ದಲದಲ್ಲಿ ಆಭರಣ, ಹಣ, ಮೊಬೈಲ್ ಇತರೆ ಬೆಲೆ ಬಾಳುವ ವಸ್ತುಗಳನ್ನು ಅಪಹರಿಸಿಕೊಂಡು ಪರಾರಿಯಾಗುತ್ತಿದ್ದಾರೆ. ಈ ಬಗ್ಗೆ ಆಗಾಗ್ಗೆ ಪೊಲೀಸರು ಕೆಲವರನ್ನು ಹಿಡಿದು ಬಿಸಿಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.
ಆದರೂ ಕಳ್ಳರ ಕೈ ಚಳಕ ಮುಂದುವರೆದಿದೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಅದೇಷ್ಟೋ ಅಮಾಯಕರು ಸಂಕಷ್ಟಕ್ಕೆ ಸಿಲುಕಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.