ವಿಜಯಸಾಕ್ಷಿ ಸುದ್ದಿ, ಮುಂಡರಗಿ
ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಗಡೆಗೆ ಕುರಿದೊಡ್ಡಿಗೆ ಹೋಗುತ್ತಿದ್ದ ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎಂಟು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟು, ಹನ್ನೆರಡು ಕುರಿಗಳಿಗೆ ತೀವ್ರವಾಗಿ ಗಾಯವಾಗಿರುವ ಘಟನೆ ಜರುಗಿದೆ.
ತಾಲೂಕಿನ ಡಂಬಳ ಬಳಿ ಈ ಘಟನೆ ನಡೆದಿದ್ದು, ಕಾರ್ ನಂಬರ್-ka-25,ma-3581 ನೇದ್ದರ ಚಾಲಕ ಮುಂಡರಗಿಯ ನಾಗರಾಜ್ ಹಾವಿನಾಳ ಎಂಬಾತನು ಗದಗ ಕಡೆಯಿಂದ ಮುಂಡರಗಿಯತ್ತ ತನ್ನ ಕಾರನ್ನು ವೇಗವಾಗಿ ಚಲಾಯಿಸಿಕೊಂಡು, ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಕುರಿಗಳಿಗೆ ಡಿಕ್ಕಿ ಪಡಿಸಿದ್ದಾರೆ.
ಈ ಘಟನೆಯಿಂದ ಮೂರು ಲಕ್ಷ, ಎಂಟು ಸಾವಿರ ರೂ.ಗಳು ಹಾನಿಯಾಗಿದೆ ಎಂದು ಡಂಬಳದ ಬಸವರಾಜ್ ಕರಿಗಾರ ಎಂಬುವರು ಮುಂಡರಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು 0115/2023, IPC 1860(U/s-279) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



