ವಿಜಯಸಾಕ್ಷಿ ಸುದ್ದಿ, ಗದಗ
ಫೇಸ್‌ಬುಕ್ ನಲ್ಲಿ ನೋಡಿದ ಜಾಹೀರಾತಿಗೆ ಮರಳಾದ ವರ್ತಕನೊಬ್ಬ ಸುಮಾರು 70 ಸಾವಿರ ರೂ. ಕಳೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿಯ ನಿವಾಸಿ ವಿನಾಯಕ ಮಾರುತಿ ಮೇದಾರ ಎಂಬವರು ಫೇಸ್‌ಬುಕ್ ನಲ್ಲಿ PVC PIPE MANUFACTURING ಅಂತ ಆಶೀರ್ವಾದ ಎಂಬ ಕಂಪನಿಯ ಮೂರು ಲೇಯರ್ 300,500,750,1000 ಲೀಟರ್ ಗಳ ಸಿಂಟೆಕ್ಷ್ ಬಗ್ಗೆ ಪ್ರತಿ ಲೀಟರ್ ಗೆ 3 ರೂ. ಹಾಗೂ ಸಂಪರ್ಕಿಸಲು 9348770986 ಹಾಕಿದ್ದ ಜಾಹೀರಾತು ನೋಡಿ, ಪಿ ವಿನಾಯಕ ಆ ನಂಬರ್ ಗೆ ಸಂಪರ್ಕಿಸಿದಾಗ, ಆರೋಪಿತರು ಆರ್ಡರ್ ಮಾಡಲು ಹೇಳಿ, ಒಟ್ಟು 38 ಸಿಂಟೆಕ್ಸ್ ಗಳ ಮೊತ್ತ 70,500/ ರೂ. ಗಳ ಬಿಲ್ ವಾಟ್ಸಾಪ್ ನಲ್ಲಿ ಕಳುಹಿಸಿ, ಆ ಹಣವನ್ನು ಖಾತೆ ನಂಬರ್-50100635715242, ifsc ನಂ.HDFC0005460 ಈ ಅಕೌಂಟ್ ಗೆ ಹಾಕಿಸಿಕೊಂಡು ಸಿಂಟೆಕ್ಸ್ ಗಳನ್ನು ಕಳುಹಿಸಿದೆ ಹಣವನ್ನು ಮರಳಿ ಕೊಡದೆ ಫಿರ್ಯಾದಿ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಮೋಸ ಮಾಡಿದ್ದಾರೆ.
ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ 0059/2023, INFORMATION TECHNOLOGY ACT 2008(U/s-66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.