ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದರೆ,‌ ಮಹಿಳೆ ಹಾಗೂ ಮತ್ತೊಬ್ಬ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಇಂದು ಮಧ್ಯಾಹ್ನ ಜರುಗಿದೆ.

ಗದಗನ ರಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆ ಹಾಗೂ ಮೂವರು ಬಾಲಕರು ನೀರಿನ ಹೊಂಡದ ಬಳಿ ಹೋದಾಗ ಇಬ್ಬರು ಬಾಲಕರು ಕಾಲು ಜಾರಿ ನೀರಲ್ಲಿ ಬಿದ್ದಿದ್ದಾರೆ. ರಕ್ಷಣೆಗೆ ಹೋಗಿದ್ದ ಮಹಿಳೆ ಹಾಗೂ ಮತ್ತೊಬ್ಬ ಬಾಲಕನೂ ನೀರಲ್ಲಿ ಮುಳುಗಿದ್ದಾರೆ. ನೀರಲ್ಲಿ ಮುಳಗುತ್ತಿದ್ದವರ ಚೀರಾಟ- ಕೂಗಾಟ ಕೇಳಿದ ರಾಜ್ ಸಿಂಗ್ ಎಂಬ ವ್ಯಕ್ತಿ ಮಹಿಳೆ ಹಾಗೂ ಓರ್ವ ಬಾಲಕನನ್ನು ರಕ್ಷಣೆ ಮಾಡಿದ್ದಾನೆ. ಆದರೆ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.

ಮಹಮ್ಮದ್ ಅಮನ್ ಹಾಗೂ ಸಂತೋಷ ಎಂಬ ಬಾಲಕರು ನೀರುಪಾಲಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಬ್ಬ ಬಾಲಕ ಮಹಮ್ಮದ್ ಆದಿಲ್ ಹಾಗೂ ಮಹಿಳೆ ಶಾಹೀನ್ ಎಂಬುವರು ರಾಜ್ ಸಿಂಗ್ ನಿಂದ ಬಚಾವ್ ಆದವರು.

ಸುದ್ದಿ ತಿಳಿದು ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಬಿ ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನೀರುಪಾಲಾದ ಇಬ್ಬರ ಬಾಲಕರ ಶೋಧ ಕಾರ್ಯ ನಡೆಸಿದ್ದಾರೆ.

ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದ್ದು, ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಎಸ್ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ಪಡೆದ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.


Spread the love

LEAVE A REPLY

Please enter your comment!
Please enter your name here