ಖರೀದಿ ಕೇಂದ್ರದ ಅವಾಂತರ; ತಹಸೀಲ್ದಾರ್ ಕಚೇರಿಗೆ ರೈತರ ಮುತ್ತಿಗೆ

0
Spread the love

ಹೆಸರು ಬೆಳೆ ಖರೀದಿಸಲು ಅಧಿಕಾರಿಗಳ ನಿರಾಕರಣೆ

Advertisement

ವಿಜಯಸಾಕ್ಷಿ ಸುದ್ದಿ, ರೋಣ


ಸರಕಾರ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಂದ ಹೆಸರು ಬೆಳೆ ಖರೀದಿಸುವಂತೆ ಖರೀದಿ ಕೇಂದ್ರಗಳನ್ನು ತೆರೆದರೂ ಸಹ ಕೇಂದ್ರದವರು ರೈತರಿಂದ ಹೆಸರನ್ನು ಖರೀದಿಸದೆ ಹಾಗೆ ಬಿಟ್ಟದ್ದರಿಂದ ರೊಚ್ಚಿಗೆದ್ದ ರೈತರು ಟ್ರ್ಯಾಕರ್ ಮೂಲಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು.

ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಹೆಸರು ನೀಡಲು ಗುರುವಾರವೇ ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಪಟ್ಟಣದ ಎಪಿಎಂಸಿಯಲ್ಲಿರುವ ಖರೀದಿ ಕೇಂದ್ರಕ್ಕೆ ಆಗಮಿಸಿದ್ದರು.

ಆದರೆ ಖರೀದಿ ಕೇಂದ್ರದವರು ಗುರುವಾರ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿ ರೈತರನ್ನು ರಾತ್ರಿ ಪೂರಾ ಖರೀದಿ ಕೇಂದ್ರದಲ್ಲಿ ಇರಿಸಿಕೊಂಡು ಬೆಳಿಗ್ಗೆ ಹೆಸರು ಬೆಳೆ ಖರೀದಿ ಬಂದಾಗಿದ್ದು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇ ರೈತರ ಆಕ್ರೋಶಕ್ಕೆ ಕಾರಣವಾಯಿತು.

ಇದರಿಂದ ಸಿಟ್ಟಿಗೆದ್ದ ರೈತರು ಟ್ರ್ಯಾಕರ್ ಸಮೇತ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

ರೈತ ಸಿದ್ದಯ್ಯ ಹಿರೇಮಠ ಮಾತನಾಡಿ, ಖರೀದಿ ಕೇಂದ್ರಕ್ಕೆ ಹೆಸರನ್ನು ತೆಗೆದುಕೊಂಡು ಗುರುವಾರವೇ ಬಂದಿದ್ದೇವೆ. ಆಗ ತೆಗೆದುಕೊಳ್ಳುತ್ತೇವೆ ಎಂದು ಹೇಳಿದವರು ಶುಕ್ರವಾರ ಬೆಳಿಗ್ಗೆ ಖರೀದಿ ಕೇಂದ್ರ ಬಂದಾಗಿದ್ದು ಮಾಲನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಆರೋಪಿಸಿದರು.

ಅಲ್ಲದೆ ಈಗಾಗಲೇ ಖರೀದಿ ಕೇಂದ್ರದಲ್ಲಿ ತಮಗೆ ಬೇಕಾದವರ ಹೆಸರನ್ನು ಖರೀದಿ ಮಾಡಿದ್ದನ್ನು ನಾವೇ ನೋಡಿದ್ದು, ಅದನ್ನು ಪ್ರಶ್ನಿಸಿದರೆ ನಮಗೆ ಬೇರೆ ಉತ್ತರ ನೀಡುತ್ತಾರೆ. ಹೀಗಾದರೆ ನಮ್ಮಂತಹ ಸಣ್ಣ ರೈತರು ಬದುಕು ನಡೆಸುವುದು ಹೇಗೆ ಎಂದ ಅವರು, ಈ ವಿಷಯವನ್ನು ತಹಸೀಲ್ದಾರ್‌ರ ಗಮನಕ್ಕೆ ತರಲಾಗಿದೆ.

ಅವರು ಸಹ ನಮಗೆ ಸ್ಪಂದಿಸಿದ್ದು ಖರೀದಿ ಕೇಂದ್ರದ ಅಧಿಕಾರಿಗಳನ್ನು ಕರೆಸಿ ವಿಚಾರಿಸಲಾಗುವುದು ಎಂದಿದ್ದಾರೆ. ಅಲ್ಲಿಯವರೆಗೆ ನಾವು ತಹಸೀಲ್ದಾರ್ ಕಚೇರಿ ಬಿಟ್ಟು ಕದಲುವುದಿಲ್ಲ ಎಂದರು.

ಹನುಮಗೌಡ ಗಿಡ್ಡಬೀಮನಗೌಡ್ರ, ವೀರಬಸನಗೌಡ ಬಾಲನಗೌಡ್ರ, ಪ್ರವೀಣ ಅಂಗಡಿ, ಹನಮಂತ ಮಾಡಲಗೇರಿ, ಮಲ್ಲಪ್ಪ ಅಕ್ಕಿ, ಅಮರೇಶ ಮ್ಯಾಗೇರಿ, ಎನ್.ಎನ್.ಹಾಳಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿದ್ದರು.


Spread the love

LEAVE A REPLY

Please enter your comment!
Please enter your name here